ಶಿರಸಿ: ಸೋದೆ ಅರಸರ ಕಾಲದ ಐತಿಹಾಸಿಕ ಹಿನ್ನೆಲೆಯುಳ್ಳ ಸೋಂದಾ ಹಳೆಯೂರು ಮಜರೆಯ ಶಂಕರನಾರಾಯಣ ದೇವಸ್ಥಾನದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಅಷ್ಟಬಂಧ ಮತ್ತು ಜೀವಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

16ನೇ ಶತಮಾನದ ಈ ಶಿಲಾ ದೇವಾಲಯವು ಶೈವ– ವೈಷ್ಣವ ಸಮನ್ವಯದ ಅಪರೂಪದ ಸಂಕೇತವಾಗಿದ್ದು, ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವೆನಿಸಿದೆ. ಅವಸಾನದ ಅಂಚಿನಲ್ಲಿದ್ದ ಈ ಗುಡಿಯನ್ನು ಸೋಂದಾ ಜಾಗೃತ ವೇದಿಕೆ, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ಜೀರ್ಣೋದ್ಧಾರಗೊಳಿಸಲಾಗಿತ್ತು. ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶಯದಂತೆ 22 ವರ್ಷಗಳ ನಂತರ ದೇವತಾ ಶಕ್ತಿ ವೃದ್ಧಿಗಾಗಿ ಪುನಃ ಅಷ್ಟಬಂಧ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 31ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಏ.1ರಂದು ಮಧ್ಯಾಹ್ನ 12.23ರ ಮುಹೂರ್ತದಲ್ಲಿ ಅಷ್ಟಬಂಧ–ಜೀವಕುಂಭಾಭಿಷೇಕ ನಡೆಯಲಿದೆ. ಏ.2ರಂದು ಹನುಮ ಜಯಂತಿಯಂದು ಸತ್ಯನಾರಾಯಣ ವ್ರತ ಹಾಗೂ ಸ್ವರ್ಣವಲ್ಲೀ ಸ್ವಾಮೀಜಿ ಅವರಿಂದ ದೇವರಿಗೆ ಬೆಳ್ಳಿ ಆಭರಣ ಸಮರ್ಪಣೆ ಮತ್ತು ಆಶೀರ್ವಚನ ಜರುಗಲಿದೆ. ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಕೋರಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-20-1591208949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.