ಶಿರಸಿ: ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ಅಪರ ಕಾರ್ಯಗಳನ್ನು ನೆಮ್ಮದಿಯ ವಾತಾವರಣ, ಸುವ್ಯವಸ್ಥಿತವಾಗಿ ಹಾಗೂ ಗೌರವಯುತವಾಗಿ ನೆರವೇರಿಸಿಕೊಳ್ಳಲು ನಿರ್ಮಿಸಲಾದ ಶಿವಾಸ ಕಟ್ಟಡವನ್ನು ಭಾನುವಾರ ನಗರದ ವಿದ್ಯಾನಗರದ ನೆಮ್ಮದಿ ಆವರಣದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ. ಶಿವರಾಮ ಕೆ.ವಿ. ಮಾತನಾಡಿ, ‘ಬದುಕಿನಲ್ಲಿ ಸಮಾಜ ನಮಗೆ ಬಹಳ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ಮನೋಭಾವದಿಂದ ಈ ಶಿವಾಸ ನಿರ್ಮಾಣದಲ್ಲಿ ಸಹಕಾರದ ಪಾಲನ್ನು ನಮ್ಮ ಕುಟುಂಬ ಮತ್ತು ಸಂಸ್ಥೆ ನೀಡಿದೆ’ ಎಂದರು.

‘ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ದುಃಖದ ಸಂದರ್ಭದಲ್ಲಿಯೂ ಸ್ವಲ್ಪ ನೆಮ್ಮದಿಯ ವಾತಾವರಣದಲ್ಲಿ ವಿಧಿವಿಧಾನಗಳನ್ನು ನೆರವೇರಿಸಿಕೊಳ್ಳಲು ಈ ಕಟ್ಟಡ ಸಹಕಾರಿಯಾಗಲಿ ಎಂಬುದು ನಮ್ಮ ಆಶಯ’ ಎಂದು ಹೇಳಿದರು.

ಕಟ್ಟಡ ಉಸ್ತುವಾರಿ ವಿ.ಪಿ.ಹೆಗಡೆ ಮಾತನಾಡಿ, ‘ಅಪರ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯ, ವಿಶ್ರಾಂತಿ ವ್ಯವಸ್ಥೆ ಹಾಗೂ ಶಾಂತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಈ ಕಟ್ಟಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವೂ ಇದೆ’ ಎಂದು ತಿಳಿಸಿದರು.

ನೂತನ ಶಿವಾಸ ಕಟ್ಟಡವನ್ನು ರಘುರಾಮ ಕೆ.ವಿ ಲೋಕಾರ್ಪಣೆ ಮಾಡಿದರು. ಭೀಮಣ್ಣ ನಾಯ್ಕ, ಹಿರಿಯ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಸೇರಿದಂತೆ ಹಲವರು ನೂತನ ಕಟ್ಟಡ ವೀಕ್ಷಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-20-1837512022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.