ಶಿರಸಿ: ಮಲೆನಾಡಿನ ಮಡಿಲಲ್ಲಿರುವ ಶಿರಸಿಯು ಬೇಸಿಗೆಯ ಪ್ರಖರತೆಗೆ ಸಾಕ್ಷಿಯಾಗುತ್ತಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲ ತಾಪದಿಂದಾಗಿ ಸಾರ್ವಜನಿಕರು ಕಂಗೆಟ್ಟಿದ್ದು, ನಗರದ ಕಾಂಕ್ರೀಟ್ ಬಿಸಿಯಿಂದ ಮುಕ್ತಿ ಪಡೆಯಲು ನೈಸರ್ಗಿಕ ಜಲಮೂಲಗಳತ್ತ ದಾಪುಗಾಲು ಹಾಕುತ್ತಿದ್ದಾರೆ.

ತಾಲೂಕಿನಾದ್ಯಂತ ಹರಿಯುವ ನದಿ, ತೊರೆ ಹಾಗೂ ಜಲಪಾತಗಳು ಈಗ ಪ್ರವಾಸಿಗರ ಪಾಲಿಗೆ ಅಕ್ಷರಶಃ ಸಂಜೀವಿನಿಯಾಗಿ ಪರಿಣಮಿಸಿವೆ. ಬಿಸಿಲ ಬೇಗೆಯಿಂದ ಪಾರಾಗಲು ವಾರಾಂತ್ಯದ ರಜೆ ದಿನಗಳಲ್ಲಿ ಜಲಮೂಲಗಳ ಬಳಿ ಜನರ ದಂಡು ಸೇರುತ್ತಿದೆ. ತಾಲ್ಲೂಕಿನ ಕೆಂಗ್ರೆಹೊಳೆ, ಪಾಂಡವರ ಹೊಳೆ, ದೇವರ ಹೊಳೆ ಹಾಗೂ ಐತಿಹಾಸಿಕ ಪ್ರಸಿದ್ಧ ಸಹಸ್ರಲಿಂಗಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಮುರೇಗಾರ ಜಲಪಾತ, ಶಿವಗಂಗಾ ಜಲಪಾತ, ಗಣೇಶಪಾಲ ಮತ್ತು ಬೆಣ್ಣೆಹೊಳೆ ಜಲಪಾತಗಳ ತಂಪಾದ ವಾತಾವರಣವು ಹೆಚ್ಚಾಗಿ ಜನರನ್ನು ಸೆಳೆಯುತ್ತಿದೆ. ಸುಡುವ ಬಿಸಿಲಿನಲ್ಲಿ ಕಾದು ಕೆಂಪಾಗಿ ಬರುವ ಜನರು, ಹರಿಯುವ ತಿಳಿನೀರಿಗೆ ಇಳಿದು ಜಲಕ್ರೀಡೆಯಾಡುತ್ತ ಬೇಸಿಗೆಯ ಬವಣೆಯನ್ನು ಮರೆಯುತ್ತಿದ್ದಾರೆ. ಮಕ್ಕಳು, ಯುವಕರು ಸೇರಿದಂತೆ ಕುಟುಂಬ ಸಮೇತರಾಗಿ ಬರುವ ಜನರು ನದಿಯ ನೀರಿನಲ್ಲಿ ಗಂಟೆಗಟ್ಟಲೆ ಕಾಲ ಕಳೆದು ಹಾಯಾಗಿ ವಿಹರಿಸುತ್ತಿದ್ದಾರೆ.

‘ಬೇಸಿಗೆಯ ತಾಪ ಹೆಚ್ಚಾದಂತೆ ಜಲಮೂಲಗಳಲ್ಲಿನ ನೀರಿನ ಮಟ್ಟವೂ ಇಳಿಕೆಯಾಗುತ್ತಿದ್ದು, ಇರುವ ಅಲ್ಪಸ್ವಲ್ಪ ನೀರಿನಲ್ಲೇ ಜನರು ಸಂತೋಷ ಹುಡುಕುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿರುವ ಈ ಜಲತಾಣಗಳು ಸದ್ಯ ಶಿರಸಿ ಭಾಗದ ಜನರಿಗೆ ಹವಾನಿಯಂತ್ರಿತ ಕೊಠಡಿಗಳಿಗಿಂತಲೂ ಹೆಚ್ಚಿನ ನೆಮ್ಮದಿ ನೀಡುತ್ತಿವೆ’ ಎನ್ನುತ್ತಾರೆ ನಗರ ನಿವಾಸಿ ಅನಿರುದ್ಧ ನಾಯ್ಕ.

ನದಿ ಹಾಗೂ ಜಲಪಾತಗಳ ಬಳಿ ಜನರ ದಂಡು ಹೆಚ್ಚಾದಂತೆ ಅನಾಹುತಗಳ ಆತಂಕವೂ ಎದುರಾಗಿದೆ. ನದಿಯ ಕೆಲವು ಆಳವಾದ ಗುಂಡಿಗಳು ಮತ್ತು ಜಲಪಾತಗಳ ಅಪಾಯಕಾರಿ ಸುಳಿಗಳ ಬಗ್ಗೆ ಅರಿಯದ ಪ್ರವಾಸಿಗರು ನೀರಿನೊಳಗೆ ಇಳಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಜಲು ಬಾರದವರು ಮತ್ತು ಯುವಕರು ಸೆಲ್ಫಿ ವ್ಯಾಮೋಹಕ್ಕೆ ಬಿದ್ದು ಅಪಾಯಕಾರಿ ಬಂಡೆಗಳ ಮೇಲೆ ಏರುವುದು ಅನಾಹುತಗಳಿಗೆ ಆಹ್ವಾನ ನೀಡುತ್ತಿದೆ.

ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಪಾಯಕಾರಿ ಜಲಮೂಲಗಳ ಬಳಿ ಈಗಾಗಲೇ ಪೊಲೀಸ್ ಬೀಟ್ ಚುರುಕುಗೊಳಿಸಲಾಗಿದ್ದು, ಸಾರ್ವಜನಿಕರು ನೀರಿನ ಆಳವಾದ ಗುಂಡಿಗಳಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ. ಅಲ್ಲದೆ, ಸ್ಥಳೀಯ ನಿವಾಸಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-20-1055449973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.