ಶಿರಸಿ: ‘ಸಂಸಾರದಲ್ಲಿ ಅರ್ಧದಷ್ಟು ಸಹಯೋಗ ನೀಡುವ ಹೆಣ್ಣಿಗೆ ರಾಜಕೀಯದಲ್ಲೂ ಶೇಕಡಾ 33ರ ಬದಲು ಶೇ 50 ರಷ್ಟು ಸಮಾನ ಅಧಿಕಾರ ಸಿಗಬೇಕು. ಮಹಿಳೆಗೆ ಕೇವಲ ಅವಕಾಶಗಳಷ್ಟೇ ಬೇಕು, ಯಾರದ್ದೋ ಅಧೀನದ ಪೀಠಗಳಲ್ಲ’ ಎಂದು ಬರಹಗಾರ್ತಿ ಕವಿತಾ ಹೆಗಡೆ ಅಭಯಂ ಪ್ರತಿಪಾದಿಸಿದರು.

ನಗರದ ಗಾಯತ್ರಿ ಗೆಳೆಯರ ಬಳಗದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಜಸ್ಟಿಸ್ ಜಿ.ಎನ್. ಸಭಾಹಿತ ಹಾಗೂ ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಾಭಾರತದಿಂದ ಮೆಟ್ರೋವರೆಗೆ ಅವಳು ಪೋಷಕ ಪಾತ್ರವೇ ಏಕೆ?’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಮಹಿಳಾ ಮೀಸಲಾತಿಗಾಗಿ ಇನ್ನೂ ಹೋರಾಡುವ ಪರಿಸ್ಥಿತಿ ಇದೆ ಎಂದರೆ ನಾವಿನ್ನೂ ಹೆಣ್ಣಿಗೆ ಸುರಕ್ಷಿತ ಸಮಾಜ ನಿರ್ಮಿಸಿಲ್ಲ ಎಂದರ್ಥ. ಇದು ಮಾನವೀಯತೆಯ ಸೋಲು. ಇಂದಿನ ಮೆಟ್ರೋ ಯುಗದಲ್ಲೂ ಮಹಿಳೆ ಕಚೇರಿ ಹಾಗೂ ಮನೆ ಎರಡರಲ್ಲೂ ಬಿಡುವಿಲ್ಲದೆ ದಣಿಯುತ್ತಿದ್ದಾಳೆ. ಸಮಾಜದಲ್ಲಿ ಎಲ್ಲ ಹಕ್ಕುಗಳಿಂದ ವಂಚಿತಳಾಗುತ್ತಿರುವ ಸ್ತ್ರೀ, ಇನ್ನು ಮುಂದೆ ಪೋಷಕ ಪಾತ್ರವಾಗದೆ ಸ್ವತಂತ್ರಅಸ್ತಿತ್ವಕ್ಕಾಗಿ ಧ್ವನಿ ಎತ್ತಬೇಕಿದೆ’ ಎಂದರು.

ಧಾರವಾಡ ಹೈಕೋರ್ಟ್ ವಕೀಲ ಎಸ್.ಕೆ.ಹೆಗಡೆ ಕಾನೂನು ಸಾಕ್ಷರತೆ ಬಗ್ಗೆ ಮಾತನಾಡಿ, ‘ಸಂವಿಧಾನದ ಮೂಲಭೂತ ಆಶಯವೇ ಬದುಕು ಮತ್ತು ಬದುಕಲು ಬಿಡು ಎಂದಾಗಿದೆ. ಸಾರ್ವಜನಿಕರು ಉಚಿತ ಕಾನೂನು ನೆರವು ಹಾಗೂ ಜನತಾ ಕೋರ್ಟ್ಗಳ ಪ್ರಯೋಜನ ಪಡೆಯಬೇಕು, ಆದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು’ ಎಂದರು.

ಕುಮಟಾ ಟೆಕ್ಸರ್ ಸಂಸ್ಥೆಯ ವ್ಯವಸ್ಥಾಪಕ ವಿಷ್ಣು ಸಭಾಹಿತ, ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿಯಾಗಿದ್ದ ಹಿರಿಯ ನ್ಯಾಯಮೂರ್ತಿಗಳ ಸ್ಮರಣೆ ಕಾರ್ಯಕ್ರಮದ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಇಂದಿರಾ ಬೈಲಕೇರಿ ನೇತೃತ್ವದ ಮಾರಿಕಾಂಬಾ ಮಾತೃ ಮಂಡಳಿಯಿಂದ ಭಗವದ್ಗೀತಾ ಪಠಣ ನಡೆಯಿತು. ಸಮಾರಂಭದಲ್ಲಿ ಸಂಯೋಜಕ ಎಂ.ಎಸ್. ಹೆಗಡೆ, ಡಿ.ಎಸ್.ಹೆಗಡೆ, ಡಿ.ಜಿ.ಹೆಗಡೆ ಇದ್ದರು. ಪ್ರಿಯಾಂಕಾ ಹೆಗಡೆ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-20-1033753664

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.