ಶಿರಸಿ: ‘ಅಂಕೋಲಾ ತಾಲ್ಲೂಕಿನ ಕುಗ್ರಾಮ ಹೆಬ್ಬಾರಗುಡ್ಡೆಯ ಬಡ ಕುಟುಂಬವೊಂದಕ್ಕೆ ಆಸರೆಯಾಗುವ ದೃಷ್ಟಿಯಿಂದ ನಗರದ ಪೊಲೀಸ್ ಮೈದಾನದಲ್ಲಿ ಮೇ 8ರಂದು ರಾತ್ರಿ 8.30ಕ್ಕೆ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟಕ ಲೋಕೇಶ ಹೆಗಡೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ‘ಜನಹಿತ ಸೇವಾ ಫೌಂಡೇಷನ್ ಹಾಗೂ ಇಕೋಕೇರ್ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಡ ಕುಟುಂಬ ಕಷ್ಟದಲ್ಲಿದ್ದು, ಅದಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ಯಕ್ಷಗಾನ ಹಮ್ಮಿಕೊಂಡಿದ್ದು ಕೃಷ್ಣ ಕುಚೇಲ, ಮಾಯಾ ಮೃಗಾವತಿ ಆಖ್ಯಾನಗಳ ಯಕ್ಷಗಾನ ಪ್ರದರ್ಶನವಾಗಲಿದೆ. ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸನ್ನ ಭಟ್ ಬಾಳ್ಕಲ್, ಸತೀಶ ಪಟಗಾರ ಬ್ರಹ್ಮೂರು, ಮದ್ದಲೆಯಲ್ಲಿ ಶಶಾಂಕ ಆಚಾರ್ಯ ಕಿರಿಮಮಂಜೇಶ್ವರ, ಅನುರುದ್ಧ ಹೆಗಡೆ ವರ್ಗಾಸರ, ಚಂಡೆಯಲ್ಲಿ ಪ್ರಜ್ವಲ ಮುಂಡಾಡಿ ಭಾಗವಹಿಸುವರು ಎಂದರು.

ಮುಮ್ಮೇಳದಲ್ಲಿ ಪುರುಷ ಪಾತ್ರದಲ್ಲಿ ನೀಲ್ಕೋಡು ಶಂಕರ ಹೆಗಡೆ, ಚಂದ್ರಹಾಸ ಗೌಡ ಹೊಸಪಟ್ಟಣ, ಪವನಕುಮಾರ ಸಾಣ್ಮನೆ, ಕಾರ್ತಿಕ ಚಿಟ್ಟಾಣಿ, ಸನ್ಮಯ ಭಟ್ ಮಲವಳ್ಳಿ, ಕೆ.ಜಿ.ಕಾರ್ತಿಕ, ಮಾಗೋಡು ಅಣ್ಣಪ್ಪ, ಕಾರ್ತಿಕ ಕಣ್ಣಿಮನೆ, ಭಾಸ್ಕರ ಮರಾಠಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ನಾಗರಾಜ ಭಟ್ ಕುಂಕಿಪಾಲ, ಸಂತೋಷ ಕುಲಾಲ ಹೆಂಗವಳ್ಳಿ, ಪ್ರಥಮ ಆಚಾರ್ಯ, ರವೀಂದ್ರ ದೇವಾಡಿಗ, ಪುರಂಧರ ಮೂಡ್ಕಣಿ ಕಾಣಿಸಿಕೊಳ್ಳುವರು. ಯಕ್ಷಗಾನ ಪ್ರದರ್ಶನ ನಡುವೆ ಹೆಸರಾಂತ ಮೃದಂಗವಾದಕ ಶಂಕರ ಭಾಗವತ ಯಲ್ಲಾಪುರ ಅವರನ್ನು ಸನ್ಮಾನಿಸಲಾಗುತ್ತದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-20-1388029008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.