ಕಾರವಾರ: ಮಹಾ ಶಿವರಾತ್ರಿ ಅಂಗವಾಗಿ ಶನಿವಾರ ಜಿಲ್ಲೆಯ ಶಿವತಾಣಗಳಿಗೆ ಭಕ್ತ ಸಾಗರ ಹರಿದು ಬಂದಿತ್ತು. ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ ಅರ್ಪಿಸಿ ಕೃತಾರ್ಥರಾದರು.

ಗೋಕರ್ಣ, ಮುರುಡೇಶ್ವರ, ಯಾಣ, ಬನವಾಸಿ, ಕವಳಾ ಗುಹೆ, ಸಹಸ್ರಲಿಂಗ ಸೇರಿದಂತೆ ಪ್ರಮುಖ ಶಿವತಾಣಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳು ನಡೆದವು. ನಗರದ ಬಾಡ ಗ್ರಾಮದ ಮಹಾದೇವ ದೇವಸ್ಥಾನ, ಶೇಜವಾಡಾದ ಶೆಜ್ಜೇಶ್ವರ ದೇವಾಲಯಗಳಲ್ಲಿಯೂ ಜನಜಂಗುಳಿ ಕಂಡುಬಂತು.

ದೇವರಿಗೆ ನೇರವಾಗಿ ಅಭಿಷೇಕ ಮಾಡಲು ಭಕ್ತರಿಗೆ ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಅವಕಾಶ ಮಾಡಿಕೊಡುವ ವಾಡಿಕೆ ಹಲವೆಡೆ ಇದೆ. ಮಹಾದೇವ ದೇವಸ್ಥಾನ, ಬನವಾಸಿ, ಇನ್ನಿತರ ಕಡೆಗಳಲ್ಲಿ ದೊರೆತ ಅವಕಾಶವನ್ನು ಬಳಸಿಕೊಳ್ಳಲು ಭಕ್ತರು ಕಾತರದಿಂದ ಭೇಟಿ ನೀಡಿದರು.

ಹಬ್ಬದ ಅಂಗವಾಗಿ ಪ್ರಮುಖ ತಾಣಗಳಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಶಿವತಾಣಗಳಿಗೆ ತೆರಳುವ ಬಸ್ಗಳು ಜನದಟ್ಟಣೆಯೊಂದಿಗೆ ಸಂಚರಿಸಿದವು.

ಗ್ರಾಮೀಣ ಭಾಗದ ಶಿವ ದೇವಾಲಯಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಡಲತೀರಗಳಲ್ಲಿಯೂ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಕಾರವಾರ ಸಹಿತ ಕೆಲವೆಡೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.