ರಾಣೆಬೆನ್ನೂರು: ತಾಲ್ಲೂಕಿನ ಕಮದೋಡ ಹದ್ದಿನಲ್ಲಿ ಬಿ.ಜಿ.ಬೂದಿಹಾಳಮಠ ಅವರ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದ ಬಿಹಾರದ ಜಮುಯಿ ಜಿಲ್ಲೆಯ ಸೋನುಕುಮಾರ ಗಲ್ಬನ ತಾಂತಿ (24) ಬುಧವಾರ ಉಸಿರಾಟದ ತೊಂದರೆಯಿಂದ ಮೃತಪಟ್ಟರು.
ಕಳೆದ ಮೂರುನಾಲ್ಕು ವರ್ಷಗಳಿಂದ ಬೂದಿಹಾಳಮಠ ಅವರ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಕುರಿತು ಹಲಗೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಇಬ್ಬರಿಗೆ ಗಾಯ
ಹಿರೇಕೆರೂರು: ಪಟ್ಟಣ ಹೊರವಲಯದ ಪ್ರಕೃತಿ ಡಾಬಾದ ಹತ್ತಿರ ಗೂಡ್ಸ್ ಲಾರಿಯು ಟ್ರ್ಯಾಕ್ಟರ್‌ಗೆ ಡಿಕ್ಕಿಯೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಬಾಳಂಬೀಡ ಗ್ರಾಮದ ಗಣೇಶಪ್ಪ ಮಹಾದೇವಪ್ಪ ಶಿವಕ್ಕನವರ ಹಾಗೂ ಅವರ ಮಗ ಶ್ರೀಧರ ಶಿವಕ್ಕನವರ ಬುಧವಾರ ಮಹೇಂದ್ರಾ ಟ್ರ್ಯಾಕ್ಟರ್‌ಗೆ ಕಲ್ಟಿವೇಟರ್ ಜೋಡಿಸಿಕೊಂಡು ಬುರುಡಿಕಟ್ಟಿ ಗ್ರಾಮದಲ್ಲಿರುವ ತಮ್ಮ ಹೊಲಕ್ಕೆ ತೆರಳುತ್ತಿದ್ದರು.
ಹಿರೇಕೆರೂರು ಹಾಗೂ ಚಿಕ್ಕೇರೂರು ರಸ್ತೆಯ ಪ್ರಕೃತಿ ಡಾಬಾದ ಹತ್ತಿರ ರಸ್ತೆಯ ಎಡಗಡೆಯಿಂದ ಬುರಡಿಕಟ್ಟಿ ಗ್ರಾಮದತ್ತ ಹೋಗುವಾಗ ಚಿಕ್ಕೇರೂರು ಕಡೆಯಿಂದ ಬಂದ ಗೂಡ್ಸ್ ಲಾರಿಯು ಟ್ರ್ಯಾಕ್ಟರ್‌ನ ಬಲ ಭಾಗದ ದೊಡ್ಡ ಟೈಯರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಚಾಲಕ ಗಣೀಶಪ್ಪ, ಶ್ರೀಧರ ಗಾಯಗೊಂಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ ಎಂಜಿನ್ ಸಂಪೂರ್ಣ ಜಖಂಗೊಂಡಿದೆ. ಈ ಕುರಿತು ಹಿರೇಕೆರೂರು ಪೋಲಿಸ್ ಠಾಣೆಯಲ್ಲಿ ಬಸವರಾಜ ಶಿವನಗೌಡ ಭರಮಗೌಡ್ರ ಎಂಬುವರು, ಗೂಡ್ಸ್ ಲಾರಿ ಚಾಲಕ ಲಿಂಗರಾಜ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.