ಸಿದ್ದಾಪುರ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸುತ್ತಿದೆ. ಏಕಮುಖ ಸಂಚಾರ, ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿದಂತೆ ಸಂಚಾರ ವ್ಯವಸ್ಥೆ ಪಾಲನೆ ಮಾಡದ ಪರಿಣಾಮ ಈ ರೀತಿಯ ಸಮಸ್ಯೆ ಉದ್ಭವಿಸಿದೆ ಎಂಬುದು ಜನರ ದೂರು.

ಪಟ್ಟಣದಲ್ಲಿ ಹೆಚ್ಚಿನ ಅಂಗಡಿಗಳು ಮತ್ತು ತರಕಾರಿ, ದಿನಸಿ ಅಂಗಡಿಗಳು ರಾಜ ಮಾರ್ಗದಲ್ಲೇ ಕೇಂದ್ರೀಕೃತವಾಗಿದೆ. ರಸ್ತೆಯೂ ಕಿರಿದಾಗಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಮಾಡಲಾಗಿದೆ. ವಾಹನ ನಿಲುಗಡೆಯನ್ನೂ ಸಹ ಎಡಕ್ಕೆ ಮತ್ತು ಬಲ ಭಾಗಕ್ಕೆ ಸರದಿಯ ಪ್ರಕಾರ ನಿಯೋಜಿಸಲಾಗಿದೆ. ಆದರೆ ಕೆಲವರು ಇದನ್ನು ಪಾಲಿಸದೇ ಇರುವುದರಿಂದ ರಾಜ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ ಎಂಬುದು ಜನರ ಅಳಲು.

‘ರಾಜ ಮಾರ್ಗದಲ್ಲಿ ಸಂತೆಯ ದಿನವಾದ ಬುಧವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಏಕಮುಖ ಸಂಚಾರ ರಸ್ತೆಯಾದರೂ ಸಹ ಜನರು ಇದನ್ನು ಪಾಲಿಸುತ್ತಿಲ್ಲ. ಬಸ್ ನಿಲ್ದಾಣದ ಕಡೆಯಿಂದ ಪಟ್ಟಣ ಪಂಚಾಯಿತಿಯ ಕಡೆಗೆ ಹೋಗಲು ಮಾತ್ರ ಅನುಮತಿ ಇದೆ. ರಾಜ ಮಾರ್ಗದ ಕೊನೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಏಕಮುಖ ಸಂಚಾರದ ಫಲಕವನ್ನೂ ಅಳವಡಿಸಿದ್ದಾರೆ. ಆದರೆ ಕೆಲವರು ಇದನ್ನು ಪಾಲಿಸದೇ ವಿಮುಖವಾಗಿ ಬೈಕ್ ಮತ್ತು ಕಾರುಗಳನ್ನು ಅತಿ ವೇಗದಿಂದ ಚಲಾಯಿಸಿ ಬರುತ್ತಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜೊತೆಗೆ ಅಪಘಾತ ಸಂಭವಿಸುವ ಭಯದಿಂದಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ರಾಮಚಂದ್ರ ನಾಯ್ಕ.

‘ರಾಜಮಾರ್ಗದಲ್ಲಿ ಮಕ್ಕಳು ಮತ್ತು ವೃದ್ಧರು ಜೀವ ಕೈಯ್ಯಲ್ಲಿಟ್ಟು ಓಡಾಡುವ ಪರಿಸ್ಥಿತಿ ಇದೆ. ಸ್ಥಳೀಯ ಪೊಲೀಸರು ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಕ್ರಮ ವಹಿಸುತ್ತಿಲ್ಲ’ ಎಂದು ಶ್ರೀಧರ ಹೆಗಡೆ ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-946546669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.