ಸಿದ್ದಾಪುರ: ‘ಅರಣ್ಯ ಹಕ್ಕು ಕಾಯ್ದೆ ಬಂದು 18 ವರ್ಷವಾದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಿ ಪುನಃ ಮಹಜರು ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ ಅದರ ಅನುಷ್ಠಾನದಲ್ಲಿ ಜಿಲ್ಲಾಡಳಿತ ವಿಫಲವಾಗಿದೆ’ ಎಂದು ಅರಣ್ಯ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

‘10,860 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. ಕಾನೂನು ಬಾಹಿರವಾಗಿ ತಿರಸೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆ ನಡೆಸಿ ಪುನಃ ಮಹಜರು ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲಿಸಿದ್ದೇವು. ಮಹಜರು ನಡೆಸುವ ವೇಳೆ ಅರ್ಜಿದಾರರಿಗೆ ಮಾಹಿತಿ ನೀಡುತ್ತಿಲ್ಲ. ಸ್ಥಳದಲ್ಲಿ ಇರಬೇಕಾದ ಅಧಿಕಾರಿಗಳು ಬರುತ್ತಿಲ್ಲ. ಕೇವಲ ನೆಪಕ್ಕೆ ಮಾತ್ರ ಮಹಜರು ನಡೆಸಲಾಗುತ್ತಿದೆ’ ಎಂದರು.

‘ಅರ್ಜಿಗಳು ಪರಿಶೀಲನೆಯಲ್ಲಿ ಇರುವಂತೆಯೇ ಅರಣ್ಯ ಇಲಾಖೆಗಳು ರೈತರ ಜಾಗದಲ್ಲಿ ಅಗಳ ತೋಡುತ್ತಿದ್ದಾರೆ. ಊರಿನ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಮಹಜರು ನಡೆಸಬೇಕೆಂಬ ಆದೇಶವಿದೆ. ಆದರೆ ಸಮಿತಿಯ ರಚನೆಗಳೇ ಆಗಿಲ್ಲ. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ. ಇನ್ನು 15 ದಿನದ ಒಳಗೆ ನಮಗೆ ಲಿಖಿತ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಅತಿಕ್ರಮಣದಾರರು ಮೂಲ ಅರ್ಜಿಯಲ್ಲಿ ದಾಖಲಿಸಿದ ಸಾಗುವಳಿ ಕ್ಷೇತ್ರ ಮಹಜರ್ನಲ್ಲಿ ಉಲ್ಲೇಖಿಸದೇ, ಜಿಪಿಎಸ್ನಲ್ಲಿ ಪ್ರಸ್ತಾಪಿಸಿದ ಕ್ಷೇತ್ರದ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದು ಮುಂತಾದ ನೂನ್ಯತೆಗಳನ್ನು ಉಲ್ಲೇಖಿಸಿದ ಮನವಿಯನ್ನು ತಹಶೀಲ್ದಾರ್ಗೆ ನೀಡಿದರು.

ತಹಶೀಲ್ದಾರ ಎಂ.ಆರ್.ಕುಲಕರ್ಣಿ ಮಾತನಾಡಿ, ‘ನಿಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ನಾನೂ ಪರಿಶೀಲನೆ ಮಾಡುತ್ತೇನೆ. ಯಾರಿಗೂ ಅನ್ಯಾಯವಾಗದಂತೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಸಿಪಿಐ ಜೆ.ಬಿ.ಸೀತಾರಾಮ, ಸಮಾಜ ಕಲ್ಯಾಣ ಇಲಾಖೆಯ ಶಿವರಾಯಪ್ಪ, ಅರಣ್ಯ ಇಲಾಖೆಯ ಮಂಜುನಾಥ ಚಿನ್ನಣ್ಣನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-20-343171478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.