ಸಿದ್ದಾಪುರ: ತಾಲ್ಲೂಕಿನ ಸಾಂಸ್ಕೃತಿಕ ಸಂಘಟನೆಯಾದ ಇಟಗಿಯ ಕಲಾಭಾಸ್ಕರದ ವತಿಯಿಂದ ಬಿದ್ರಕಾನ್ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮೇ 28ರಿಂದ 31ರ ವರೆಗೆ ನಾಲ್ಕು ದಿನಗಳ ಕಾಲ ‘ನವರಸ ಯಕ್ಷೋತ್ಸವ’ ಹಮ್ಮಿಕೊಳ್ಳಲಾಗಿದೆ.

ಮೇ 28 ರಂದು ಸಂಜೆ 6.15ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಇಟಗಿ ಮಹಾಬಲೇಶ್ವರ ಭಟ್ಟ ವಿರಚಿತ ‘ಗೋ ಮಹಿಮೆ’ ಹಾಗೂ ಕವಿ ಮಾಲೆಕೊಡಲು ಶಂಭು ಗಣಪತಿ ಭಟ್ಟ ವಿರಚಿತ ‘ಚಂದ್ರಹಾಸ ಚರಿತ್ರ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮೇ 29ರ ಸಂಜೆ ಕನ್ಯಾನ ವೆಂಕಟರಮಣ ಭಟ್ಟ ವಿರಚಿತ ‘ಭಸ್ಮಾಸುರ ಮೋಹಿನಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೇ 30 ರಂದು ಕವಿ ತಿರುಮಲ ವಿರಚಿತ ‘ಕಾರ್ತವೀರ್ಯಾರ್ಜುನ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಮೇ 31 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ನಂತರ ಕವಿ ದೇವಿದಾಸ ವಿರಚಿತ ದಕ್ಷಯಜ್ಞ ಎಂಬ ಯಕ್ಷಗಾನ ಪ್ರರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗಿಯಾಗಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಕಲಾಭಾಸ್ಕರದ ಅಧ್ಯಕ್ಷ ಇಟಗಿಮಹಾಬಲೇಶ್ವರ ಹಾಗೂ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-20-799877292

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.