ಸಿದ್ದಾಪುರ: ತಾಲ್ಲೂಕಿನ ವಾಜಗದ್ದೆ ಸಮೀಪದ ಶಾನಬಾಳೆಗದ್ದೆಯ ಶ್ರೀ ಶನೇಶ್ವರ ದೇವಸ್ಥಾನ ಟ್ರಸ್ಟ್ ಇವರಿಂದ ಶನೇಶ್ವರ ದೇವರಸನ್ನಿಧಿಯಲ್ಲಿ ಸಂಪ್ರೋಕ್ಷಣ್ಯ ಕಾರ್ಯಕ್ರಮದ ಅಂಗವಾಗಿ ಶನಿವಾರ ಗಾನಸಂಪ್ರೋಕ್ಷಣ್ಯ ಕಾರ್ಯಕ್ರಮ ಏರ್ಪಡಿಸಲಾಯಿತು.

ಗಾನ ಸಂಪ್ರೋಕ್ಷಣ್ಯ ಕಾರ್ಯಕ್ರಮದಲ್ಲಿ ಪಂಚವಟಿ, ರಾಮನಿರ್ಯಾಣ, ವಿಶ್ವಾಮಿತ್ರಮೇನಕೆ, ಭೀಷ್ಮವಿಜಯ, ಚಕ್ರಚಂಡಿಕೆ,ಪಾಪಣ್ಣ ವಿಜಯ, ಚಂದ್ರಹಾಸ, ದ್ರೌಪದಿ ಪ್ರತಾಪ, ಮಾಯಾಮೃಗಾವತಿ, ರಾಣಿಶಶಿಪ್ರಭೆ, ಕವಿರತ್ನಕಾಳಿದಾಸ, ಬಬ್ರುವಾಹನ, ರತ್ನಾವತಿ ಕಲ್ಯಾಣ, ಶನಿಶ್ವರ ಮಹಾತ್ಮೆ ಸೇರಿದಂತೆ ಯಕ್ಷಗಾನದ ಹಲವು ಪೌರಾಣಿಕ ಪ್ರಸಂಗಗಳ ಅಪರೂಪದ ಪದ್ಯಗಳನ್ನು ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಉತ್ತಮವಾಗಿ ಹಾಡಿ ರಂಜಿಸಿದರು.

ಮದ್ದಳೆಯಲ್ಲಿ ಶಶಾಂಕ ಆಚಾರ್ಯ ಕಿರುಮಂಜೇಶ್ವರ, ಶ್ರೀವತ್ಸ ಗುಡ್ಡೆದಿಂದ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಜ್ವಲ್ ಮುಂಡಾಡಿ ಉತ್ತಮವಾಗಿ ಸಾಥ್ ನೀಡಿ ಮೆಚ್ಚುಗೆಗಳಿಸಿದರು.

ದೇವಾಲಯ ನಿರ್ಮಾಣದಲ್ಲಿ ಸಹಕಾರ ನೀಡಿದ ಗಣ್ಯರಾದ ಶಂಕರ ಭಟ್ಟ ಎಲೆಸರ ಅವರನ್ನು ಸನ್ಮಾನಿಸಲಾಯಿತು. ಪಿ.ವಿ.ಹೆಗಡೆ ಹೊಸಗದ್ದೆ, ಗೋಪಾಲ ಹೆಗಡೆ ಹುಲಿಮನೆ, ಮಂಜುನಾಥ, ಅಣ್ಣಪ್ಪ ಶಾನಬಾಳೆಗದ್ದೆ ಇದ್ದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-1036080208

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.