ಸಿದ್ದಾಪುರ: ಪಟ್ಟಣದ ಶಂಕರಮಠದ ಆವರಣದಲ್ಲಿ ಜನಹಿತ ಸೇವಾ ಫೌಂಡೇಷನ್ ಶಿರಸಿ ಇವರ ಸಂಯೋಜನೆಯಲ್ಲಿ ಕೋಟಿ ಸಸ್ಯಪಾಲಕ ಸುರೇಶ ನಾಯ್ಕ ಹದಿನಾರನೇಮೈಲಿಕಲ್ಲು ಇವರಿಗೆ ಸನ್ಮಾನ ಹಾಗೂ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನ ಭಾನುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ಮಾತನಾಡಿ, ಸುರೇಶ ನಾಯ್ಕ ಅವರು ಕಳೆದ 37 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ವರೆಗೆ ಕೋಟಿಗೂ ಮೀರಿ ಗಿಡಗಳನ್ನು ಬೆಳೆಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಖ್ಯಾತ ವೈದ್ಯ ಡಾ.ಕೆ.ಶ್ರೀಧರ ವೈದ್ಯ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಸುರೇಶ ನಾಯ್ಕ ಮಾತನಾಡಿ, ನಾನು ಕೋಟಿ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಹಾಗೂ ಜನರ ಸಹಕಾರವೇ ಕಾರಣ ಎಂದರು.

ಅರಣ್ಯ ಇಲಾಖೆಯ ಅಧಿಕಾರಿ ಗುಡದಯ್ಯ, ಉದ್ಯಮಿ ಯೋಗಾನಂದ ನಾಯ್ಕ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಲಯನ್ಸ ಅಧ್ಯಕ್ಷ ರಾಘವೇಂದ್ರ ಭಟ್ಟ, ಕಲಾಪೋಷಕ ಅಶೋಕ ಹೆಗಡೆ ಹಿರೇಕೈ, ಹಾರ್ಸಿಕಟ್ಟಾ ಗ್ರಾ.ಪಂ.ಮಾಜಿ ಅಧ್ಯಕ್ಷೆ ಹನುಮಕ್ಕ ಬೋವಿ, ಕಲಾ ಸಂಘಟಕ ರವಿ ಕೊಂಡ್ಲಿ ಉಪಸ್ಥಿತರಿದ್ದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ ನಿರ್ವಹಿಸಿದರು. ಜನಹಿತ ಸೇವಾ ಫೌಂಡೇಷನ್ ಅಧ್ಯಕ್ಷ ಲೋಕೇಶ ಹೆಗಡೆ ವಂದಿಸಿದರು. ನಂತರ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಪ್ರೊ.ಪವನ ಕಿರಣಕೆರೆ ವಿರಚಿತ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-877547736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.