ಶಿರಸಿ: ನಗರಸಭೆ ಸ್ವಾಮಿತ್ವದ ಸರ್ವೆ ನಂ. 104 ಮತ್ತು 105ರಲ್ಲಿರುವ ಬಸವೇಶ್ವರ ಕಾಲೊನಿಯ ನಿವಾಸಿಗಳ ದಶಕಗಳ ಬೇಡಿಕೆಯಾದ ನಿವೇಶನ ಸಕ್ರಮದ ಸಮಸ್ಯೆಯನ್ನು ರಿಯಾಯಿತಿ ದರದಲ್ಲಿ ಬಗೆಹರಿಸಿಕೊಡಬೇಕು ಎಂದು ಬಸವೇಶ್ವರ ಕಾಲೊನಿ ಹಿತರಕ್ಷಣಾ ಸಮಿತಿ ವತಿಯಿಂದ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಸದಸ್ಯರು ಬುಧವಾರ ನಗರಸಭೆಗೆ ಆಗಮಿಸಿ ತಮಗಾಗುತ್ತಿರುವ ಅನ್ಯಾಯ ಮತ್ತು ಕಾಲೊನಿಯ ಇತಿಹಾಸವನ್ನು ಮನವಿ ನೀಡುವ ಮೂಲಕ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಅವರಿಗೆ ವಿವರಿಸಿದರು.

‘1948ರಲ್ಲಿ ಕಂದಾಯ ಇಲಾಖೆಯಿಂದ ನಗರಸಭೆಗೆ ಹಸ್ತಾಂತರಗೊಂಡ ಈ ಜಾಗದಲ್ಲಿ 70 ಖಾಲಿ ನಿವೇಶನಗಳನ್ನು ಮಾಡಿ, 1952-1953ರ ಅವಧಿಯಲ್ಲಿ 30 ವರ್ಷಗಳ ಲೀಸ್ ಮೇಲೆ ವಿತರಿಸಲಾಗಿತ್ತು. ನಂತರದ ದಿನಗಳಲ್ಲಿ ನಗರಸಭೆಯ ಸಭೆಗಳಲ್ಲಿ ಚದರ ಅಡಿಗೆ ₹8ರಂತೆ ಸಕ್ರಮ ಮಾಡಲು ಸರ್ವಾನುಮತದ ಠರಾವು ಪಾಸು ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು’ ಎಂದರು.

‘2000-2001ನೇ ಸಾಲಿನ ಅಸೆಸ್ಮೆಂಟ್ ರಿಜಿಸ್ಟರ್ನಲ್ಲಿ ಇಲ್ಲಿ ಮನೆ ಕಟ್ಟಿ ವಾಸವಿರುವವರನ್ನು ಮಾಲೀಕರ ಕಾಲಂನಲ್ಲಿ ನಮೂದಿಸಲಾಗಿತ್ತು. ಆದರೆ ಇತ್ತೀಚೆಗೆ ಈ ಜಾಗದಲ್ಲಿ ಇರುವವರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರದಿಂದ ಈ ಕುರಿತ ವರದಿಯನ್ನೂ ಪಡೆಯಲಾಗಿದೆ ಎಂಬ ಮಾಹಿತಿ ಲಭಿಸಿದೆ’ ಎಂದು ತಿಳಿಸಿದರು.

‘ಸಾಗರ, ಬಿಜಾಪುರ, ದಾಂಡೇಲಿ ಹಾಗೂ ಇತ್ತೀಚೆಗೆ ಹಳಿಯಾಳ ಪಟ್ಟಣದಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಇಂತಹ ನಿವೇಶನಗಳನ್ನು ಸಕ್ರಮಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅದೇ ಮಾದರಿಯನ್ನು ಶಿರಸಿ ನಗರಸಭೆಯೂ ಅಳವಡಿಸಿಕೊಳ್ಳಬೇಕು’ ಎಂದು ನಿವಾಸಿಗಳು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ನಗರಸಭೆಯಿಂದ ಒಕ್ಕಲೆಬ್ಬಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಸರ್ಕಾರ ಈ ಬಗ್ಗೆ ಮಾಹಿತಿ ಕೇಳಿದ್ದು, ಅದರಂತೆ ವರದಿ ನೀಡಿದ್ದೇವೆ. ಸರ್ಕಾರದ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಮಿತಿ ಅಧ್ಯಕ್ಷ ಅಬ್ದುಲ್ ಹಕ್ ಶೇಖ್, ಕೃಷ್ಣಮೂರ್ತಿ ಶೆಟ್ಟಿ, ಶಿವರಾಮ ಚಂದಾವರ, ರಮೇಶ ಚಂದಾವರ, ಮುಜಫರ್ ಶೇಖ್, ಶಿವನಗೌಡ ಪಾಟೀಲ, ತುಕಾರಾಂ ಅಂಕೋಲೆಕರ, ಆರ್.ವಿ.ಭಾಗವತ, ಅನಂತ ಶಿರಸಿಕರ, ಸ್ಟ್ಯಾಂಡ್ಲಿ ಡಿಸೋಜಾ, ಅಲೆಕ್ಸ್, ನಂದನ ಸಾಗರ, ಆನಂದ ಸಾಲೇರ, ನಾಗರಾಜ ನಾಯ್ಕ, ಶ್ರೀಕಾಂತ ನಾಯ್ಕ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-20-1626856786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.