ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ ನಗರಸಭೆ:ಗದ್ದುಗೆ ಏರಿದ ಬಿಜೆಪಿ

ಶರ್ಮಿಳಾ ಅಧ್ಯಕ್ಷೆ, ರಮಾಕಾಂತ್‍ಗೆ ಉಪಾಧ್ಯಕ್ಷ ಪಟ್ಟ
Published 22 ಆಗಸ್ಟ್ 2024, 15:59 IST
Last Updated 22 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶರ್ಮಿಳಾ ಮಾದನಗೇರಿ ಅಧ್ಯಕ್ಷರಾಗಿ, ರಮಾಕಾಂತ ಭಟ್ ಉಪಾಧ್ಯಕ್ಷರಾಗಿ ಚುನಾಯಿತರಾದರು.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಗುರುವಾರ ನಗರಸಭೆಯ ಅಟಲ್‍ಜೀ ಸಭಾಭವನದಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಗರದ 4ನೇ ವಾರ್ಡ್ ಸದಸ್ಯೆ ಬಿಜೆಪಿಯ ಶರ್ಮಿಳಾ ಮಾದನಗೇರಿ ಹಾಗೂ ಉಪಾಧ್ಯಕ್ಷರಾಗಿ 28ನೇ ವಾರ್ಡ್ ಸದಸ್ಯ, ಬಿಜೆಪಿಯ ರಮಾಕಾಂತ ಭಟ್ ಆಯ್ಕೆಗೊಂಡರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶರ್ಮಿಳಾ ಮಾದನಗೇರಿ, ಕಾಂಗ್ರೆಸ್‌ನಿಂದ ವನಿತಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಮಾಕಾಂತ ಭಟ್ ಹಾಗೂ ಕಾಂಗ್ರೆಸ್‌‍ನ ದಯಾನಂದ ನಾಯಕ ನಾಮಪತ್ರ ಸಲ್ಲಿಸಿದ್ದರು. ನಂತರ ಜರುಗಿದ ಚುನಾವಣೆಯಲ್ಲಿ ಶರ್ಮಿಳಾ ಮಾದನಗೇರಿ 19 ಮತಗಳನ್ನು ಪಡೆದರೆ, ವನಿತಾ ಶೆಟ್ಟಿ 12 ಮತ ಪಡೆದರು. ರಮಾಕಾಂತ ಭಟ್ 19 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ ದಯಾನಂದ ನಾಯಕ 12 ಮತ ಪಡೆದು ಪರಾಭವಗೊಂಡರು.

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ 19 ಬಿಜೆಪಿ ಸದಸ್ಯರಲ್ಲಿ ಓರ್ವ ಸದಸ್ಯರು ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಸೇರಿ 19 ಮತಗಳು ಬಿಜೆಪಿ ಪರವಾಗಿ ಚಲಾವಣೆಗೊಂಡವು.

ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT