ಶಿರಸಿ: ‘ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ನೆಡುತೋಪು ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಹಾಗೂ ಹಿಂದಿನ ಮೂರು ವರ್ಷಗಳಲ್ಲಿ ನೆಟ್ಟಿರುವ ಮತ್ತು ಬದುಕಿರುವ ಗಿಡಗಳ ಸಂಖ್ಯೆ, ಮಾಡಲಾದ ಖರ್ಚು ಕುರಿತ ಸಂಪೂರ್ಣ ಮಾಹಿತಿಯನ್ನು ಮುಂದಿನ 30 ದಿನಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಆಗ್ರಹಿಸಿದೆ.

ಅರಣ್ಯ ಭೂಮಿ ಹಕ್ಕು ಹೋರಾಟ ಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅರಣ್ಯ ಇಲಾಖೆಯ ಕೆನರಾ ಸರ್ಕಲ್ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಬರೆದ ಲಿಖಿತ ಪತ್ರವನ್ನು ಸೋಮವಾರ ಸಂಘಟನೆಯ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

‘ನೆಡುತೋಪು ಕಾಮಗಾರಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ವಾಗಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿ ರುವ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕು ಅಧಿನಿಯಮ ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಅವಶ್ಯವಿರುವ 6 ಪ್ರಮುಖ ಅಂಶಗಳ ಮಾಹಿತಿಯನ್ನು ಅರಣ್ಯ ಇಲಾಖೆಯು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಿಸಬೇಕು’ ಎಂದರು.

‘ಕೆನರಾ ಸರ್ಕಲ್ ವ್ಯಾಪ್ತಿಯಲ್ಲಿ ಇತ್ತೀಚಿನ ಐದು ವರ್ಷಗಳಲ್ಲಿ ನಡುತೋಪು ವಿವಿಧ ಯೋಜನೆಯಡಿ ಪ್ರತಿವರ್ಷ ನೆಟ್ಟಿರುವ ಗಿಡಗಳ ಸಂಖ್ಯೆ, ಅದಕ್ಕಾಗಿ ಬಳಸಲಾದ ಒಟ್ಟು ಪ್ರದೇಶ ಹಾಗೂ ತಗಲಿರುವ ಸಂಪೂರ್ಣ ವೆಚ್ಚದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ನೆಡುತೋಪು ಗಿಡ ನೆಡುವ ಕ್ಷೇತ್ರದಲ್ಲಿ ಅಳವಡಿಸುವ ಸೂಚನಾ ಫಲಕದಲ್ಲಿ ಗುತ್ತಿಗೆದಾರನ ಹೆಸರು ಮತ್ತು ಕಾಮಗಾರಿಯ ಮೊತ್ತವನ್ನು ಪ್ರಕಟಿಸದೇ ಇರಲು ಕಾರಣವೇನು ಎಂಬುದನ್ನು ಇಲಾಖೆ ಸ್ಪಷ್ಟಪಡಿಸುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ’ ಎಂದು ಹೇಳಿದರು.

‘ಕಾಲಕಾಲಕ್ಕೆ ಸ್ಥಳ ಅಧ್ಯಯನ ನಡೆಸಿ ಸಿದ್ಧಪಡಿಸಲಾಗುವ ನೆಟ್ಟ ಗಿಡಗಳ ಜೀವಂತಿಕೆಯ ಇತ್ತೀಚಿನ ಮೂರು ಪರಿಶೀಲನಾ ವರದಿಗಳನ್ನು ಬಹಿರಂಗ ಪಡಿಸುವುದರ ಜತೆಗೆ, ಪ್ರಸಕ್ತ ವರ್ಷದ ನೆಡುತೋಪು ಯೋಜನೆಯ ಮಾಹಿತಿಯನ್ನು ಆಯಾ ವಲಯ ಅರಣ್ಯ ಕಚೇರಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಇಬ್ರಾಹಿಂ ಸಾಬ್ ಗೌಡಳ್ಳಿ, ಕೆ.ಟಿ.ನಾಯ್ಕ ಹೆಗ್ಗೇರಿ, ರಾಜರಾಮ ಹೊನ್ನೇಬಿಡಾರ, ಗೋವಿಂದ ನಾಯ್ಕ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-20-1523582777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.