ಶಿರಸಿ: ‘ತಾಲ್ಲೂಕಿನ ಕಾಳಂಗಿ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿದಂತೆ 2015ರಿಂದ ಈವರೆಗೆ ನಡೆದ ಸಂಘದ ಎಲ್ಲಾ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಹಕಾರ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದು ಸಂಘದ ಉಪಾಧ್ಯಕ್ಷ ನಟರಾಜ ಹೊಸೂರು ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ಮುಖ್ಯ ಕಾರ್ಯನಿರ್ವಾಹಕ ನಡೆಸಿದ ಅಕ್ರಮಗಳು ನಮ್ಮ ಆಡಳಿತಾವಧಿಯಲ್ಲಿ ಬೆಳಕಿಗೆ ಬಂದಿವೆ. ಈ ಹಿಂದೆ ಸಂಘದ ಸಭೆಯಲ್ಲಿ ಸ್ವತಃ ಕಾರ್ಯದರ್ಶಿಯೇ ₹25 ಲಕ್ಷ ಅವ್ಯವಹಾರ ನಡೆಸಿರುವುದನ್ನು ಒಪ್ಪಿಕೊಂಡಿದ್ದರು. ಅವರನ್ನು ಅಮಾನತುಗೊಳಿಸಿ, ಅವರ ಆಸ್ತಿಯ ಮೇಲೆ ಶೇ 14ರ ಬಡ್ಡಿಯಂತೆ ₹75 ಲಕ್ಷ ಬೋಜಾ ಹಾಕಿದ್ದೇವೆ. ಕಾನೂನಾತ್ಮಕ ಕ್ರಮದಿಂದಾಗಿಯೇ ಕೆಲವರಿಂದ ಸಂಘದ ವಿರುದ್ಧ ಅನಗತ್ಯ ಗೊಂದಲ ಸೃಷ್ಟಿಯಾಗಿದೆ’ ಎಂದರು.

‘ಈಗ ಹೋರಾಟದ ಮುಂಚೂಣಿಯಲ್ಲಿ ನಿಂತಿರುವವರೇ ಸಂಘದಿಂದ ದೊಡ್ಡ ಮೊತ್ತದ ಸಾಲ ಪಡೆದು ಮರುಪಾವತಿ ಮಾಡದೆ ಕಟ್ಟುಬಾಕಿದಾರರಾಗಿದ್ದಾರೆ. ಸಂಘವು ಮುಳುಗಿದರೆ ತಮ್ಮ ಸಾಲ ಸಂಪೂರ್ಣ ಮನ್ನಾ ಆಗುತ್ತದೆ ಎಂಬ ದುರುದ್ದೇಶದಿಂದ ಗೊಂದಲ ಮೂಡಿಸಲಾಗುತ್ತಿದೆ. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಆಗಿದ್ದ ಸಾಲವನ್ನು ಈಗಿನ ಆಡಳಿತ ಮಂಡಳಿ ತಲೆಗೆ ಕಟ್ಟಿ ಸಂಘವನ್ನು ಮುಳುಗಿಸುವ ಹುನ್ನಾರ ನಡೆದಿದೆ. ಹಿಂದಿನ ಮಂಡಳಿಯ ಅವಧಿಯಲ್ಲಿಯೇ ₹1.83 ಕೋಟಿ ನಷ್ಟ ಉಂಟಾಗಿದ್ದಕ್ಕೆ ದಾಖಲೆ ಇದೆ’ ಎಂದರು.

ರಾಜೇಂದ್ರ ಗೌಡ, ರಾಜಶೇಖರ ಗೌಡರ, ದೇವರಾಜ್ ಕೋವೆರ, ರಘುಕುಮಾರ ಪಾಟೀಲ, ಕುಮಾರ ಮುಕ್ಕಪ್ಪ ಗೌಡ, ನಾಗರಾಜ ನಾಗಪ್ಪ ಯಾಲಕ್ಕಿ, ಗೌರಾಜಿ ಗೌಡ, ಶೈಲಜಾ ಕತಬಾಯಿ, ದೇವರಾಜ ನಾಯ್ಕ ರಾಮಾಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-20-557081648

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.