ಶಿರಸಿ: ನಗರ ಭಾಗದ ಅರಣ್ಯ ಅತಿಕ್ರಮಣದಾರರ ಜಾಗದ ಜಿಪಿಎಸ್ ಆಗಿ 8 ವರ್ಷಗಳು ಕಳೆದರೂ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ನೂರಾರು ಕುಟುಂಬಗಳು ಹೊಸ ಮನೆ ಕಟ್ಟಲಾಗದೇ, ಶಿಥಿಲಾವಸ್ಥೆಯಲ್ಲಿನ ಹಳೆಯ ಮನೆಗಳ ದುರಸ್ತಿಯನ್ನೂ ಕೈಗೊಳ್ಳಲಾಗದ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಇಲ್ಲಿನ ಗಣೇಶ ನಗರ, ಗೋಸಾವಿಕೇರಿ, ಪುಟ್ಟನಮನೆ, ಬೆನಕ ಕಾಲೊನಿ, ಮರಾಠಿಕೊಪ್ಪ, ರಾಜೀವನಗರ, ಅಂಬಾಗಿರಿ ಕೆಲ ಭಾಗ, ಗಾಂಧಿನಗರದ ಕೆಲ ಪ್ರದೇಶ, ರಾಮನಬೈಲ್ ಪ್ರದೇಶಗಳಲ್ಲಿನ 4,000ಕ್ಕೂ ಹೆಚ್ಚು ಕುಟುಂಬಗಳು ತಲೆಮಾರುಗಳಿಂದ ಅರಣ್ಯ ಭೂಮಿಯ ಸರ್ವೇ ನಂಬರ್ ವ್ಯಾಪ್ತಿಯ ಪ್ರದೇಶದಲ್ಲಿ ವಾಸವಾಗಿವೆ.

‘6 ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕುಟುಂಬಗಳು ನೆಲೆಸಿದ್ದರೂ, ಬೆರಳೆಣಿಕೆಯಷ್ಟು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿದೆ. ಬಹುಪಾಲು ನಿವಾಸಿಗಳು ಹಕ್ಕುಪತ್ರಕ್ಕೆ ಕಚೇರಿಗಳಿಗೆ ಅಲೆಯುವಂತಾಗಿದೆ’ ಎನ್ನುತ್ತಾರೆ ಅರಣ್ಯ ಪ್ರದೇಶ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ನಿವಾಸಿಯೊಬ್ಬರು.

‘2018ರಲ್ಲಿಯೇ ನಗರಸಭೆ ವತಿಯಿಂದ ವಾರ್ಡ್ ಅರಣ್ಯ ಸಮಿತಿ ರಚಿಸಿ ಅರ್ಜಿ ಸ್ವೀಕರಿಸಿ, ಜಾಗದ ಜಿಪಿಎಸ್ ಮಾಡಿ, ವರದಿಯನ್ನು ಅರಣ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಈವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ. ನಗರ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಒತ್ತುವರಿ ಪ್ರಕರಣಗಳು ಮತ್ತು ಜನರ ನೈಜ ವಸತಿ ಸಮಸ್ಯೆಗಳು ದಶಕಗಳಿಂದ ನನೆಗುದಿಗೆ ಬಿದ್ದಿದ್ದರೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ’ ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ.

‘ಅಧಿಕೃತ ದಾಖಲೆಗಳು ಇಲ್ಲದ ಕಾರಣ ಈ ಭಾಗದ ನಿವಾಸಿಗಳು ತಮ್ಮ ನಿವೇಶನದ ಮೇಲೆ ಯಾವುದೇ ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಸ ಮನೆ ಕಟ್ಟಲು ಅಥವಾ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನೆರವು ಪಡೆಯಲು ಜನರಿಗೆ ಯಾವುದೇ ಮಾರ್ಗವಿಲ್ಲ’ ಎಂದು ತಿಳಿಸಿದರು.

‘ತಂದೆಯ ಕಾಲದಿಂದಲೂ ನಾವು ಇದೇ ಜಾಗದಲ್ಲಿ ಬದುಕುತ್ತಿದ್ದೇವೆ. ಹಳೆಯ ಮನೆಯನ್ನು ಪದೇ ಪದೇ ದುರಸ್ತಿ ಮಾಡುತ್ತ ದಿನದೂಡುತ್ತಿದ್ದೇವೆ. ಈಗ ಮನೆಗಳು ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಸ್ಥಿತಿಗೆ ತಲುಪಿವೆ. ಆದರೆ ಹೊಸದಾಗಿ ಮನೆ ನಿರ್ಮಿಸಲು ಹೋದರೆ ಆಡಳಿತದಿಂದ ಒಪ್ಪಿಗೆ ಸಿಗುತ್ತಿಲ್ಲ’ ಎಂದು ಗಣೇಶನಗರದ ಶೇಖರ ದೂರಿದರು.

ಅರ್ಜಿದಾರರ ಅರ್ಜಿಗಳಿಗೆ ಸಂಬಂಧಿಸಿ ಜಿಪಿಎಸ್ ವರದಿ ನಗರಸಭೆಯಿಂದ ಇಲಾಖೆಗಳಿಗೆ ನೀಡಲಾಗಿದೆ. ಇನ್ನೊಮ್ಮೆ ಇಲಾಖೆಗಳಿಗೆ ಜ್ಞಾಪನ ಪತ್ರ ನೀಡಲಾಗುವುದು
ಪ್ರಕಾಶ ಚನ್ನಪ್ಪನವರ ಪೌರಾಯುಕ್ತ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-489329141

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.