ಶಿರಸಿ: ‘ನಗರದ ಅಂಬೇಡ್ಕರ್ ಭವನದಲ್ಲಿ ಜೂನ್ 5 ರಿಂದ 7 ರವರೆಗೆ ಶಿವಮೊಗ್ಗದ ಗಜಮುಖ ಇವೆಂಟ್ಸ್ ವತಿಯಿಂದ ಮಾವು ಹಾಗೂ ಹಲಸಿನ ಹಣ್ಣಿನ ಮೇಳವನ್ನು ಆಯೋಜಿಸಲಾಗಿದೆ’ ಎಂದು ಇವೆಂಟ್ಸ್ ಮುಖ್ಯಸ್ಥ ದೀಪಕ ಶೆಣೈ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ತಲುಪಿಸುವ ಪ್ರಯತ್ನವಾಗಿ ಈ ಮೇಳ ಹಮ್ಮಿಕೊಳ್ಳಲಾಗಿದೆ. 20 ವರ್ಷಗಳಿಂದ ಗಜಮುಖ ಇವೆಂಟ್ಸ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಶಿರಸಿ ನಗರದಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಕರ್ನಾಟಕದ ಮೂಲೆ ಮೂಲೆಗಳಿಂದ ವ್ಯಾಪಾರಸ್ಥರು ಹಾಗೂ ನೇರ ರೈತರು ಈ ಮೇಳಕ್ಕೆ ಆಗಮಿಸಿ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ. ಸಾರ್ವಜನಿಕರಿಗೆ ಮೇಳಕ್ಕೆ ಉಚಿತ ಪ್ರವೇಶ ಇರಲಿದ್ದು, ಆಸಕ್ತರು ಯಾರು ಬೇಕಾದರೂ ಮಳಿಗೆಗಳನ್ನು ತೆರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಮೇಳದ ಪ್ರಮುಖ ಆಕರ್ಷಣೆಯಾಗಿ ಬಗೆ ಬಗೆಯ ಹಲಸು ಮತ್ತು ಮಾವಿನ ಹಣ್ಣುಗಳು ಮಾತ್ರವಲ್ಲದೇ, ವಿವಿಧ ತಳಿಯ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ಮಾವು ಹಾಗೂ ಹಲಸಿನಿಂದ ತಯಾರಿಸಿದ ವೈವಿಧ್ಯಮಯ ಖಾದ್ಯಗಳ ಮಳಿಗೆಗಳು ಇರಲಿವೆ. ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಬಗೆಯ ಹೂವಿನ ಮತ್ತು ತರಕಾರಿಯ ಬೀಜಗಳು ಹಾಗೂ ನೇರ ಉತ್ಪಾದಕರಿಂದ ಗ್ರಾಹಕರಿಗೆ ತಲುಪಿಸುವ ಸ್ವದೇಶಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಹ ಇರಲಿವೆ’ ಎಂದು ಅವರು ವಿವರಿಸಿದರು. ಈ ವೇಳೆ ಸಂಘಟಕ ರಮೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-20-1986612255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.