ಶಿರಸಿ: ತಾಲ್ಲೂಕಿನ ಮುರೇಗಾರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರ ನಿಧಿಯಿಂದ ಮಂಜೂರಾದ ಲಕ್ಷಾಂತರ ರೂಪಾಯಿ ಅನುದಾನವು ಗುತ್ತಿಗೆದಾರರ ನಿಷ್ಕಾಳಜಿಯಿಂದಾಗಿ ವ್ಯರ್ಥವಾಗುತ್ತಿದ್ದು, ಶಾಸಕರು ಕೂಡಲೇ ಈ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿ ರಸ್ತೆ ನಿರ್ಮಿಸಲು ಸೂಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಲವು ವರ್ಷಗಳ ನಿರಂತರ ಬೇಡಿಕೆಯ ನಂತರ ಗ್ರಾಮಕ್ಕೆ ಶಾಸಕರ ಅನುದಾನದಡಿ ₹15 ಲಕ್ಷ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದೆ. ಆದರೆ, ಈ ಹಣವನ್ನು ತೀರಾ ಕಡಿಮೆ ಜನಸಂಚಾರವಿರುವ ಹಾಗೂ ಮನೆಗಳೇ ಇಲ್ಲದ ಮುರೇಗಾರ-ಮುದ್ದಿನಪಾಲ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಜನರು ಓಡಾಡದ ಹಾಗೂ ಮನೆಗಳೇ ಇಲ್ಲದ ಕಾಡಿನ ಹಾದಿಯಂತಹ ರಸ್ತೆಯನ್ನು ಡಾಂಬರೀಕರಣ ಮಾಡುತ್ತಿರುವುದು ಶಾಸಕರ ಅನುದಾನದ ದುರುಪಯೋಗ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, ಮುರೇಗಾರ ಗ್ರಾಮಕ್ಕೆ ಎರಡು ಸಂಪರ್ಕ ರಸ್ತೆಗಳಿದ್ದು, ಸದ್ಯ ಕಾಮಗಾರಿ ನಡೆಯುತ್ತಿರುವ ರಸ್ತೆಗಿಂತ ಸಾಲಕಣಿ-ಮುರೇಗಾರ ರಸ್ತೆಯು ಅತ್ಯಂತ ಪ್ರಮುಖವಾದುದಾಗಿದೆ. ಸುಮಾರು 4 ಕಿ.ಮೀ. ಉದ್ದದ ಈ ಮುಖ್ಯ ರಸ್ತೆಯಲ್ಲಿ ಈಗಾಗಲೇ 2 ಕಿ.ಮೀ. ಡಾಂಬರೀಕರಣವಾಗಿದ್ದು, ಉಳಿದ ಭಾಗ ಸಂಪೂರ್ಣ ಮೆಟ್ಲಿಂಗ್ ಆಗಿದೆ. ನಿತ್ಯ ನೂರಾರು ಜನ ಬಳಸುವ ಈ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು, ಅಪ್ರಯೋಜಕ ರಸ್ತೆಗೆ ಹಣ ವಿನಿಯೋಗಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಗ್ರಾಮದ ಅಭಿವೃದ್ಧಿಗೆಂದು ಮಂಜೂರಾದ ಹಣವು ಯಾವುದೋ ದುರುದ್ದೇಶಕ್ಕೋ ಅಥವಾ ಗುತ್ತಿಗೆದಾರರ ಸ್ವಾರ್ಥಕ್ಕೋ ವ್ಯರ್ಥವಾಗುತ್ತಿರುವುದು ಶಾಸಕರ ಗಮನಕ್ಕೆ ಬಂದಂತಿಲ್ಲ. ಕೂಡಲೇ ಶಾಸಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಹಾಲಿಯಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಸಾರ್ವಜನಿಕರಿಗೆ ನಿಜವಾಗಿಯೂ ಅಗತ್ಯವಿರುವ ಸಾಲಕಣಿ-ಮುರೇಗಾರ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-20-662305847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.