ಶಿರಸಿ: ‘ಸೌರಶಕ್ತಿಯ ಬಳಕೆಯಿಂದ ಇಂಧನದ ಮೇಲಿನ ಒತ್ತಡ ತಡೆಯಲು ಸಾಧ್ಯ’ ಎಂದು ಗೋಕಲ್ದಾಸ್ ಎಕ್ಸಪೋರ್ಟ್ ಫೌಂಡೇಶನ್ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್ಆರ್) ಮುಖ್ಯಸ್ಥ ರಾಜೇಂದ್ರ ಪ್ರಸಾದ ಅಭಿಪ್ರಾಯಪಟ್ಟರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇಲ್ಲಿನ ಸ್ಕೊಡ್ವೆಸ್ ಸಂಸ್ಥೆಯ ನಿರ್ವಹಣೆಯಲ್ಲಿರುವ ಅಶಕ್ತ ಮಹಿಳೆಯರ ಆಶ್ರಯ ತಾಣ ಶಕ್ತಿ ಸದನಕ್ಕೆ ಬೆಂಗಳೂರಿನ ಗೋಕಲ್ದಾಸ್ ಎಕ್ಸಪೋರ್ಟ್ ಫೌಂಡೇಶನ್ ವತಿಯಿಂದ ಸೋಲಾರ್ ವಾಟರ್ ಹೀಟರ್ನ್ನು ಶುಕ್ರವಾರ ವಿತರಿಸಿ ಅವರು ಮಾತನಾಡಿದರು. ‘ಜಾಗತಿಕ ಇಂಧನ ಉದ್ಯಮದಲ್ಲಾಗುತ್ತಿರುವ ತಲ್ಲಣಗಳು ನವೀಕರಿಸಬಹುದಾದ ಇಂಧನ ಬಳಕೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಿವೆ. ಮುಂದಿನ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಇಂಧನಗಳೂ ಸಹ ಬಹುಮುಖ್ಯ ಪಾತ್ರವಹಿಸುವುದರಿಂದ ನೈಸರ್ಗಿಕ ಹಾಗೂ ನವೀಕರಿಸಬಹುದಾದ ಇಂಧನದ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಗಮನವಹಿಸುವುದು ಸೂಕ್ತ’ ಎಂದರು.

ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ, ‘ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಗ್ರಾಮಗಳ ಅರಣ್ಯ ಅವಲಂಬಿತ ಕುಟುಂಬಗಳ ಉರುವಲು ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೋಲಾರ್ ಹಾಗೂ ಜೈವಿಕ ಇಂಧನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಇತರರಿದ್ದರು. ಯೋಜನಾ ವಿಭಾಗದ ಮುಖ್ಯಸ್ಥ ವಿರೇಂದ್ರ ಸಿ. ಸೋಲಾರ್ ಉಪಕರಣಗಳನ್ನು ಸ್ವೀಕರಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-20-2041605265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.