ಶಿರಸಿ: ನಗರದ ಕೊರ್ಲಕಟ್ಟಾ ರಸ್ತೆಯಲ್ಲಿರುವ ಶ್ರೀಗಂಧದ ಕಲಾ ಸಂಕೀರ್ಣ ಪ್ರದೇಶದ ವಾತಾವರಣವು ನರಕವಾಗಿ ಮಾರ್ಪಟ್ಟಿದೆ. ಕಸ್ತೂರಬಾನಗರದಿಂದ ಹರಿದು ಬರುವ ಕೊಳಚೆ ನೀರು ಇಲ್ಲಿನ ನಿವಾಸಿಗಳ ಬದುಕನ್ನು ದುಸ್ತರಗೊಳಿಸಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನ ದೂಡುತ್ತಿದ್ದೇವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕಸ್ತೂರಬಾ ನಗರದಲ್ಲಿ ಈಚೆಗೆ ನಿರ್ಮಿಸಲಾದ ಕಾಂಕ್ರೀಟ್ ಚರಂಡಿಗಳ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ತಗ್ಗು ಪ್ರದೇಶದಲ್ಲಿರುವ ಶ್ರೀಗಂಧದ ಕಲಾ ಸಂಕೀರ್ಣದಲ್ಲಿ ಶೇಖರಣೆಯಾಗುತ್ತಿದೆ. ಮುಖ್ಯ ರಸ್ತೆಯಲ್ಲಿರುವ ಮೋರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದ್ದು, ಕಸ್ತೂರಬಾನಗರದ ಸಕಲ ತ್ಯಾಜ್ಯಗಳು ಶ್ರೀಗಂಧದ ಸಂಕೀರ್ಣದ ಅಂಗಳದಲ್ಲಿ ಬಂದು ನಿಲ್ಲುತ್ತಿವೆ ಎಂಬುದು ಜನರ ಆರೋಪ.

‘ಸುಮಾರು 52 ಬಡ ಕುಶಲಕರ್ಮಿ ಕುಟುಂಬಗಳು ಇಲ್ಲಿ ವಾಸವಿದ್ದು, ಇವರ ಸ್ಥಿತಿ ಶೋಚನೀಯವಾಗಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಇದ್ದ ಎರಡು ಬಾವಿಗಳ ಪೈಕಿ ಒಂದು ಚರಂಡಿ ನೀರಿನಿಂದಾಗಿ ಸಂಪೂರ್ಣ ಕಲುಷಿತಗೊಂಡಿದ್ದರೆ, ಮತ್ತೊಂದು ಬಾವಿ ಬತ್ತಿ ಹೋಗಿದೆ. ನಗರಸಭೆಯ ಕುಡಿಯುವ ನೀರಿನ ಸೌಲಭ್ಯವೂ ಈ ಭಾಗಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಹಾರಿಕೆ ಉತ್ತರದ ಮೂಲಕ ಬಡವರ ನೋವಿಗೆ ಬೆಲೆ ಇಲ್ಲದಂತಾಗಿದೆ. ದಾಖಲೆಗಳ ಪ್ರಕಾರ ಈ ಸರ್ವೆ ನಂಬರ್ ನಗರಸಭೆ ವ್ಯಾಪ್ತಿಯಲ್ಲಿದ್ದರೂ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿ ಅಸಹನೀಯವಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಎಚ್.ಆರ್.ಜಗದೀಶ.

‘ನಗರದ ತ್ಯಾಜ್ಯವೆಲ್ಲಾ ನಮ್ಮ ಮನೆಯಂಗಳಕ್ಕೆ ಬರುತ್ತಿದೆ. ನಿಂತ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮಕ್ಕಳು ಮತ್ತು ವೃದ್ಧರು ಈ ವಾತಾವರಣದಲ್ಲಿ ವಾಸಿಸುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತಿದೆ’ ಎನ್ನುತ್ತಾರೆ ಮೋಹನ ಗುಡಿಗಾರ.

‘ಮಳೆಗಾಲದಲ್ಲಿ ಇಡೀ ಪ್ರದೇಶ ತ್ಯಾಜ್ಯದಿಂದ ತುಂಬಿ ಹೋಗುತ್ತಿದ್ದು, ವಿಪರೀತ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಇದೆ. ಮನುಷ್ಯರು ಇಂತಹ ಹೊಲಸಿನಲ್ಲಿ ವಾಸಿಸುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಚರಂಡಿ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡದಿದ್ದಲ್ಲಿ, ನಿವಾಸಿಗಳು ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ನಿವಾಸಿ ಮಹೇಶ ಗುಡಿಗಾರ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-1928321639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.