ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬದನಗೋಡ ಪಂಚಾಯ್ತಿಯ 8 ಸದಸ್ಯರು ಕಾಂಗ್ರೆಸ್ ಸೇರ್ಪಡೆ

ದಾಸನಕೊಪ್ಪದಲ್ಲಿ ನಡೆದ ಕಾರ್ಯಕ್ರಮ
Published 23 ಏಪ್ರಿಲ್ 2023, 14:51 IST
Last Updated 23 ಏಪ್ರಿಲ್ 2023, 14:51 IST
ಅಕ್ಷರ ಗಾತ್ರ

ಶಿರಸಿ: ಆಪರೇಷನ್ ಕಮಲದ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲಿಸಿ ಬಿಜೆಪಿ ಸೇರಿದ್ದ ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿಯ 8 ಸದಸ್ಯರು ಹಾಗೂ 250ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್ ಸೇರ್ಪಡೆಯಾದರು.

ತಾಲ್ಲೂಕಿನ ದಾಸನಕೊಪ್ಪದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪಂಚಾಯ್ತಿ ಸದಸ್ಯರಾದ

ನಟರಾಜ ಹೊಸೂರು, ಲಕ್ಷ್ಮೀ ಚರಂತಿಮಠ, ಆಶಾ ಸಾಕೆಣ್ಣನವರ್,

ಮಾರುತಿ ಮಟ್ಟೇರ, ಕುಮಾರ ಮಾಳಕ್ಕನವರ್, ಶಶಿಕಲಾ ನಾಯ್ಕ, ಅಶೋಕ ನೇರಲಗಿ, ವಿದ್ಯಾ ವಾಲ್ಮೀಕಿ ಹಾಗೂ ಇತರರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಮಾತನಾಡಿ,

ಕೆರೆಗೆ ನೀರು ಬೇಕಾಗುವುದು ಜನವರಿ ನಂತರ. ಆದರೆ ಆ ವೇಳೆಗೆ ವರದಾ ನದಿಯಲ್ಲಿ ನೀರು ಇರುವುದಿಲ್ಲ. ಸುಮ್ಮನೆ ಪರ್ಸಂಟೇಜ್ ಪಡೆಯಲು ಜನರ ತೆರಿಗೆ ಹಣ ಉಪಯೋಗಿಸಿ ಯೋಜನೆ ಜಾರಿ ಮಾಡಿಕೊಂಡಿದ್ದು ಸರಿಯಲ್ಲ ಎಂದರು.

ಆಡಳಿತ ವಿರೋಧಿ ಅಲೆಯಿದೆ. ಮಂತ್ರಿಯಾದ ನಂತರ ಹೆಬ್ಬಾರ್ ರ ಗಳಿಕೆ ಎಷ್ಟು ಹೆಚ್ಚಿದೆ ಎಂಬುದು ಮತದಾರರಿಗೆ ತಿಳಿದಿದೆ. ಇವೆಲ್ಲ ಕಾಂಗ್ರೆಸ್ ಗೆ ಅನುಕೂಲ ಆಗಲಿದೆ ಎಂದ ಅವರು, ಕ್ಷೇತ್ರದಲ್ಲಿ ಟಾರ್ಪಲಿನ್ ವಿತರಿಸಲೂ ಶಾಸಕರ ಅನುಮೋದನೆ ಪತ್ರ ಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ. ಪಕ್ಷದಲ್ಲಿ ಶಾಸಕರ ಪುತ್ರ ಕೈಯಾಡಿಸುವುದು ಹೆಚ್ಚಿದೆ.

ಹಾನಗಲ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜನಬಲ ಗೆದ್ದಿತ್ತು. ಇಲ್ಲಿ ಕೂಡ ಹಣಬಲದ ಎದುರು ಜನಬಲ ಗೆಲ್ಲಲಿದೆ ಎಂದರು. ಮತದಾನಕ್ಕೆ ಎರಡು ದಿನ ಇರುವಾಗ ಕವರ್ ನಲ್ಲಿ ಲಕ್ಷ್ಮೀ ಹಾಕಿಕೊಂಡು ಬಿಜೆಪಿಗರು ಮತದಾರರ ಮನೆಗೆ ಬರುತ್ತಾರೆ. ಆ ಲಕ್ಷ್ಮಿಯನ್ನು ತೆಗೆದುಕೊಳ್ಳಿ. ಯಾಕೆಂದರೆ ಅದು ನಿಮ್ಮ ತೆರಿಗೆ ಹಣವೇ ಆಗಿದೆ ಎಂದರು.

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ಎಸ್.ಬಾಲಿ, ಪಂಚಾಯ್ತಿ ಸದಸ್ಯ ನಟರಾಜ ಹೊಸೂರು, ಕಾಂಗ್ರೆಸ್ ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್.ನಾಯ್ಕ, ಪಕ್ಷದ ಪ್ರಮುಖರಾದ ಸುನೀಲ ನಾಯ್ಕ, ಬಸವರಾಜ ದೊಡ್ಮನಿ, ಶ್ರೀನಿವಾಸ ಭಟ್ ಧಾತ್ರಿ, ಬಸವರಾಜ ನಂದಿಕೇಶ್ವರಮಠ, ಈರಪ್ಪ ನಾಯ್ಕ, ಶಶಿಕಲಾ ನಾಯ್ಕ, ಭೂಪತಿ, ಸುದರ್ಶನ ನಾಯ್ಕ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT