ಸಾಹಿತಿ ಅನಸೂಯಾ ಹೆಗಡೆ ಅವರ ‘ಪ್ರವಾಸ ಕಥನ ಮತ್ತು ಕಥಾ ಪ್ರಪಂಚ' ಕೃತಿಯನ್ನು ಕವಯತ್ರಿ ಲತಾ ಹೆಗಡೆ, ಬಾಳೆಗದ್ದೆ ಅವಲೋಕಿಸಲಿದ್ದು, ಹಿರಿಯ ಸಾಹಿತಿ ಜಿ.ವಿ.ಭಟ್ ಕೊಪ್ಪಲತೋಟ ಅವರ ‘ಮಹಾಸಮರ' ನಾಟಕ ಕೃತಿಯನ್ನು ಸಾಹಿತಿ ಜಿ.ಎ.ಹೆಗಡೆ ಸೋಂದಾ ಅವಲೋಕಿಸಲಿದ್ದಾರೆ. ಶರಧಿ ವಸಂತ ಫಾಯ್ದೆಯವರಿಂದ ಸುಗಮ ಸಂಗೀತ ನಡೆಯಲಿದೆ. ಇದರ ಜತೆ ಸ್ವಾತಂತ್ರ್ಯ ಸಂಭ್ರಮ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವರಚಿತ ಕವಿತೆಯೊಂದಿಗೆ ಪಾಲ್ಗೊಳ್ಳಬೇಕು ಎಂದು ಸಂಘಟಕರು ಕೋರಿದ್ದಾರೆ.