ಶಿರಸಿ: ‘ಪೌಷ್ಟಿಕ ಆಹಾರದ ಸೇವನೆಯು ಕ್ಷಯ ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಔಷಧಿಗಳ ಪರಿಣಾಮ ವೃದ್ಧಿಸಲು ಸಹಾಯ ಮಾಡುತ್ತದೆ’ ಎಂದು ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ ಭಂಡಾರಿ ಹೇಳಿದರು.

ತಾಲ್ಲೂಕಿನ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾನಿಗಳು ನೀಡಿದ ಪೌಷ್ಟಿಕ ಆಹಾರದ ಕಿಟ್ಗಳನ್ನು ಗುರುವಾರ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

‘ಕ್ಷಯ ರೋಗಿಗಳ ಶೀಘ್ರ ಗುಣಮುಖವಾಗಲು ಕೇವಲ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳು ಮಾತ್ರ ಸಾಕಾಗುವುದಿಲ್ಲ, ಅವುಗಳ ಜತೆಗೆ ಪೌಷ್ಟಿಕ ಆಹಾರದ ಸೇವನೆಯೂ ಅನಿವಾರ್ಯವಾಗಿದೆ’ ಎಂದರು.

‘ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸರಿಯಾದ ಪೋಷಣೆಯು ದೇಹದ ತೂಕ ಹೆಚ್ಚಿಸಲು, ದೌರ್ಬಲ್ಯ ಕಡಿಮೆ ಮಾಡಲು ಹಾಗೂ ಶೀಘ್ರ ಗುಣಮುಖರಾಗಲು ನೆರವಾಗುತ್ತದೆ. ಹೀಗಾಗಿ ನಿಕ್ಷಯ ಮಿತ್ರ ಯೋಜನೆ ಅಡಿ ಪೌಷ್ಟಿಕ ಆಹಾರ ಒದಗಿಸಲು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು’ ಎಂದರು.

ಕಿಟ್ ದೇಣಿಗೆ ನೀಡಿದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಲತಾ ಆಚಾರಿ ಮಾತನಾಡಿ, ‘ಸೂಕ್ತ ಚಿಕಿತ್ಸೆಯ ಜತೆಗೆ ಪೌಷ್ಟಿಕ ಆಹಾರ ಸೇವನೆಯು ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ’ ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕ ವಿ. ಎಂ. ಸುಧಾಕರ ಕ್ಷಯ ರೋಗಿಗಳು ಪಾಲಿಸಬೇಕಾದ ಕ್ರಮಗಳನ್ನು ವಿವರಿಸಿದರು.

ಸುರೇಖಾ ಚಾಪೋಲೆಕರ್ ಸ್ವಾಗತಿಸಿದರು. ರೇಣುಕಾ ಗಡ್ಕರಿ ಹಾಗೂ ದೀಪ್ತಿ ನಿರೂಪಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ದಿವ್ಯಾ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಪಟಗಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-20-1512448947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.