ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿ ಅಮೃತ ಯೋಜನೆಯಡಿ ಕೈಗೊಳ್ಳಲಾಗಿರುವ ನಲ್ಲಿಗಳಿಗೆ ಮೀಟರ್ ಅಳವಡಿಸುವ ಕಾರ್ಯದಲ್ಲಿ ಶೇ 63ರಷ್ಟು ಜೋಡಣಾ ಕಾರ್ಯ ಇನ್ನೂ ಬಾಕಿ ಉಳಿದುಕೊಂಡಿದೆ.

ಸುಮಾರು 80 ಸಾವಿರ ಜನಸಂಖ್ಯೆ ಹೊಂದಿರುವ ಮತ್ತು 31 ವಾರ್ಡ್ಗಳನ್ನು ಒಳಗೊಂಡಿರುವ ನಗರಕ್ಕೆ ನಿತ್ಯ 75 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ತಾಲ್ಲೂಕಿನ ಮಾರಿಗದ್ದೆ ಹಾಗೂ ಕೇಂಗ್ರೆ ಜಾಕ್ವೆಲ್ನಿಂದ ಸುಮಾರು 11 ಸಾವಿರಕ್ಕೂ ಹೆಚ್ಚು ನಳಗಳಿಗೆ ನೀರು ಪೂರೈಸಲಾಗುತ್ತಿದೆ.

ನೀರು ಪೂರೈಕೆಯಲ್ಲಿ ಪಾರದರ್ಶಕತೆ ತರಲು ಮತ್ತು ನೀರಿನ ಪೋಲಾಗುವುದನ್ನು ತಡೆಯಲು ಅಮೃತ ಯೋಜನೆಯಡಿ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿತ್ತು. ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ನಗರ ನೀರು ಸರಬರಾಜು ಮಂಡಳಿ ವತಿಯಿಂದ ಕಾಮಗಾರಿಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

‘ನಗರದಾದ್ಯಂತ 4,000 ಹೊಸ ಮೀಟರ್ಗಳನ್ನು ಅಳವಡಿಸುವ ಗುರಿಯಲ್ಲಿ ಈವರೆಗೆ ಕೇವಲ 1,700 ಮೀಟರ್ಗಳನ್ನು ಮಾತ್ರ ಅಳವಡಿಸಲಾಗಿದೆ. ಶೇ 57.5ರಷ್ಟು ಗುರಿ ಇನ್ನೂ ಬಾಕಿ ಉಳಿದುಕೊಂಡಿದೆ. ಎರಡು ವರ್ಷಗಳ ಹಿಂದೆಯೇ ಅಳವಡಿಸಲಾಗಿದ್ದ 7,195 ಹಳೆಯ ಮೀಟರ್ಗಳನ್ನು ಹೊಸ ಪೈಪ್ಲೈನ್ಗೆ ಸ್ಥಳಾಂತರಿಸುವ ಕಾರ್ಯದಲ್ಲೂ ತೀವ್ರ ಹಿನ್ನಡೆಯಾಗಿದೆ. ಈವರೆಗೆ ಕೇವಲ 2,500 ಮೀಟರ್ಗಳನ್ನು ಮಾತ್ರ ಮರುಜೋಡಣೆ ಮಾಡಲಾಗಿದ್ದು, ಇದು ಒಟ್ಟು ಗುರಿಯ ಶೇ 34.7ರಷ್ಟು ಮಾತ್ರ ಪ್ರಗತಿಯಾಗಿದೆ’ ಎಂದು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

‘ಮೀಟರ್ ಅಳವಡಿಸಿದ ಕೆಲ ಕಡೆ ನೀರು ಸಮರ್ಪಕವಾಗಿ ಬರುತ್ತಿಲ್ಲ. ಹೊಸ ಪೈಪ್ ಮಾರ್ಗಕ್ಕಾಗಿ ರಸ್ತೆ ಹಲವೆಡೆ ಅಗೆಯಲಾಗಿದೆ. ಕೆಲವೆಡೆ ಪೈಪ್ ಅಳವಡಿಸಲಾಗಿದೆ. ಹಲವೆಡೆ ಇನ್ನೂ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ಹಲವೆಡೆ ರಸ್ತೆ ಪಕ್ಕದಲ್ಲಿ ಅಗೆದು, ಡಾಂಬರು ಮಾಡದೆ ಹಾಗೆಯೇ ಬಿಟ್ಟಿರುವುದು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ, ಬರುವ ಮಳೆಗಾಲದೊಳಗೆ ಅಗೆದ ಜಾಗವನ್ನು ಸರಿಪಡಿಸದಿದ್ದರೆ ಅನಾಹುತಕ್ಕೆ ಅವಕಾಶ ಆಗುತ್ತದೆ’ ಎನ್ನುತ್ತಾರೆ ನಗರ ನಿವಾಸಿ ಸೀತಾರಾಮ ನಾಯ್ಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-155880322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.