ಭಟ್ಕಳ: ರಾಜ್ಯಮಟ್ಟದ ದೇಹದಾರ್ಢ್ಯ (ಬಾಡಿಬಿಲ್ಡಿಂಗ್) ಸ್ಪರ್ಧೆ ಫೆ. 22ರಂದು ಸಂಜೆ 6 ಗಂಟೆಗೆ ಭಟ್ಕಳದ ಆನಂದಾಶ್ರಮ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಇಲ್ಲಿನ ಬಾಡಿಬಿಲ್ಡಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಕ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಬುಧವಾರ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಅವರು, ‘ಎಂಟು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ನ್ಯಾಯಸಮ್ಮತ ಸ್ಪರ್ಧೆ ನಡೆಸಲು ರಾಜ್ಯದ 25–30 ಅನುಭವಿ ರೆಫ್ರಿಗಳನ್ನು ನಿಯೋಜಿಸಲಾಗಿದೆ. ಉತ್ತಮ ಆರೋಗ್ಯ, ಶ್ರೇಷ್ಠ ದೈಹಿಕ ಸಾಮರ್ಥ್ಯ ಹಾಗೂ ಫಿಟ್ ಜೀವನಶೈಲಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ₹25 ಸಾವಿರ, ರನ್ನರ್ ಅಪ್ ಸ್ಪರ್ಧಿಗೆ ₹15 ಸಾವಿರ ನಗದು ಬಹುಮಾನ ನೀಡಲಾಗುವುದು. ಸಚಿವ ಮಂಕಾಳ ವೈದ್ಯ ಸಹಕಾರದಿಂದ ತಾಲೂಕಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ಹೇಳಿದರು.

ಭಟ್ಕಳದ ಬಾಡಿಬಿಲ್ಡಿಂಗ್ ಅಸೋಸಿಯೇಶನ್ನ ಅಧ್ಯಕ್ಷ ಅಜಿಜುರ್ ರಹಮಾನ್, ಗೌರವ ಅಧ್ಯಕ್ಷ ನಜೀರ ಕಾಶಿಮ್ ಜಿ, ಸದಸ್ಯರಾದ ಗಣೇಶ ನಾಯ್ಕ, ಫಾಸ್ಕಲ್ ಗೋಮ್ಸ್, ರಾಘವೇಂದ್ರ ಗೊಂಡ, ವಿವೇಕ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.