ಮುಂಡಗೋಡ ಬಸ್ ನಿಲ್ದಾಣದಿಂದ ಹೊರಡುವ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿಗಳು ಮೆಟ್ಟಿಲು ಮೇಲೆ ನಿಂತು ಪ್ರಯಾಣಿಸುತ್ತಿರುವುದು.

ಜೊಯಿಡಾದಿಂದ ವಾಗೇಲಿಗೆ ರಾತ್ರಿ ತಂಗುವ ಬಸ್ಸು ಕಾರ್ಟೊಳಿಯವರೆಗೆ ಮಾತ್ರ ಬರುತ್ತದೆ. ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ವಾಗೇಲಿಗೆ ನಡೆದುಕೊಂಡು ಸಂಚರಿಸಬೇಕಾಗುತ್ತದೆ
– ಯುವರಾಜ ಮೀರಾಶಿ, ಜೊಯಿಡಾ ಕಾಲೇಜು ವಿದ್ಯಾರ್ಥಿ 
ಈ ಹಿಂದೆ ಸ್ಥಗಿತಗೊಂಡಿದ್ದ ಮಾರ್ಗಗಳನ್ನು ಶಕ್ತಿ ಯೋಜನೆ ಜಾರಿಯಾದ ಬಳಿಕ ಪುನರಾರಂಭಿಸಲಾಗಿದೆ. ಬಸ್‌ಗಳು ಸಾಧ್ಯವಾದಷ್ಟು ಸುಸ್ಥಿತಿಯಲ್ಲಿಡುವ ಪ್ರಯತ್ನ ಸಾಗಿದ್ದು ಬೇಡಿಕೆ ಇರುವ ಗ್ರಾಮಗಳಿಗೆ ಬಸ್ ಸಂಚರಿಸಲು ಕ್ರಮವಹಿಸುತ್ತೇವೆ
– ಬಸವರಾಜ ಅಮ್ಮನವರ್, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ
ಕೆಳಾಸೆ ಕುದ್ರಗೋಡ ಸೇರಿ 12 ಹೊಸ ಮಾರ್ಗದಲ್ಲಿ ಬಸ್ ಓಡಿಸುವಂತೆ ಬೇಡಿಕೆಯಿದ್ದು ಈವರೆಗೆ ಸ್ಪಂದನೆಯಿಲ್ಲ. ಈ ಭಾಗದ ನಾಗರಿಕರಿಗೆ ತೊಂದರೆ ಆಗುತ್ತಿದೆ
– ಪಾರ್ವತಿ ಮರಾಠಿ ಕೆಳಾಸೆ ಗ್ರಾಮಸ್ಥೆಹಳಿಯಾಳದ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಭಾಗಕ್ಕೆ ತೆರಳುವ ಬಸ್ ದಟ್ಟಣೆಯಾಗುವ ಕಾರಣದಿಂದ ಏರಲು ವಿದ್ಯಾರ್ಥಿಗಳು ಪ್ರಯಾಣಿಕರು ಪೈಪೋಟಿಯಲ್ಲಿ ತೊಡಗಿದ್ದರು.
ಬಸ್ ಕೊರತೆ ಕಾರಣದಿಂದ ಉಳವಿ ಭಾಗದ ಹಳ್ಳಿಗಳ ವಿದ್ಯಾರ್ಥಿಗಳು ಬಸ್ ಹತ್ತಲು ಕುಂಬಾರವಾಡ ಬಸ್ ನಿಲ್ದಾಣದಲ್ಲಿ ಪೈಪೋಟಿಯಲ್ಲಿ ತೊಡಗಿದ್ದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.