ಶಿರಸಿ: ‘ಸ್ವರ್ಣವಲ್ಲಿ ಮಹಾ ಸಂಸ್ಥಾನದ ಲಕ್ಷ್ಮೀನರಸಿಂಹ ದೇವರ ಜಯಂತಿ ಅಂಗವಾಗಿ ಏ.29 ಮತ್ತು 30ರಂದು ಮಠದಲ್ಲಿ ಕೃಷಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಶನಿವಾರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಮಂಕಾಳ ವೈದ್ಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಭಾಗವಹಿಸುವರು’ ಎಂದು ವಿವರಿಸಿದರು.

‘ಮೊದಲ ದಿನ ರಾಜ್ಯ ಮಟ್ಟದ ಕೃಷಿ ರಸಪ್ರಶ್ನೆ ಸ್ಪರ್ಧೆ ಹಾಗೂ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಂಜೆ 4ಕ್ಕೆ ಕಾಫಿ-ಏಲಕ್ಕಿ-ಕಾಳುಮೆಣಸು ಅಡಿಕೆ ತೋಟದಲ್ಲಿದ್ದರೆ ಸೊಗಸು ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ತಜ್ಞರಾದ ಸುಧೀಶ ಕುಲಕರ್ಣಿ ಮತ್ತು ಹರೀಶ ಡಿ.ಕೆ. ಮಾಹಿತಿ ನೀಡುವರು. ಬಳಿಕ ಕೃಷಿಕರೊಂದಿಗೆ ಸಂವಾದ ಹಾಗೂ ಸುಧಾ ಹೆಗಡೆ ತಂಡದಿಂದ ಭಕ್ತಿ ಸಂಗೀತ ನಡೆಯಲಿದೆ’ ಎಂದರು.

‘ಏ.30ರಂದು ಬೆಳಿಗ್ಗೆ ತೋಟ ವೀಕ್ಷಣೆ ಹಾಗೂ ಏಲಕ್ಕಿ ಮತ್ತು ಬಿದಿರು ಬೇಸಾಯದ ಕುರಿತು ಸಭೆ ನಡೆಯಲಿದೆ. ರವಿ ಭಟ್ ಹಾಗೂ ರಾಮಕೃಷ್ಣ ಹೆಗಡೆ ವಿಷಯ ಮಂಡಿಸುವರು. ಸಂಜೆ 4.30ಕ್ಕೆ ನಡೆಯುವ ಸಮಾರೋಪದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪ್ರಮುಖ ಸಹಕಾರಿಗಳು ಭಾಗವಹಿಸುವರು. ಅಂದು ರಾತ್ರಿ ಲಕ್ಷ್ಮೀನರಸಿಂಹ ಮಹಾರಥೋತ್ಸವ ಜರುಗಲಿದೆ. ಯಕ್ಷಶಾಲ್ಮಲಾ ತಂಡದಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಕೃಷಿ ಜಯಂತಿಯ ಭಾಗವಾಗಿ ಕೃಷಿ ಉತ್ಪನ್ನಗಳು, ಸ್ಥಳೀಯ ರೈತರು ತಯಾರಿಸಿದ ಸರಳ ಯಂತ್ರೋಪಕರಣಗಳು ಹಾಗೂ ಸಾವಯವ ಗೊಬ್ಬರಗಳ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಪ್ರತಿಷ್ಠಾನದ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಸುಬ್ರಾಯ ಹೆಗಡೆ ತ್ಯಾಗಲಿ ಹಾಗೂ ರತ್ನಾಕರ ಬಾಡಲಕೊಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-20-524824826

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.