ಭಟ್ಕಳ: ಯುವ ಪೀಳಿಗೆ ಪಾರಂಪರಿಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಭವಿಸಲು ಹಾಗೂ ಮಹತ್ವವನ್ನು ತಿಳಿಯಲು ಪಾರಂಪರಿಕ ಉಡುಪಿನ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ರಂಜನ್ ಇಂಡೇನ್ ಎಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಹೇಳಿದರು.

ಅವರು ಇತ್ತೀಚಿಗೆ ಪಟ್ಟಣದ ಶ್ರೀಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪಾರಂಪರಿಕ ಉಡುಪಿನ ಸ್ಪರ್ಧೆ ಹಾಗೂ ನೃತ್ಯಾಂಜಲಿ ಹೆಣ್ಣು ಮಕ್ಕಳ ಗುಂಪು ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಾರಂಪರಿಕ ಉಡುಪು ಸ್ಫರ್ಧೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಪರಮೇಶ್ವರ, ಕರುಣಾ ಮೊಗೇರ, ದ್ವಿತೀಯ ಪಿಯುಸಿಯಲ್ಲಿ ಜೀವನ್ ಮತ್ತು ರ್ಯಾ ಪಡಿಯಾರ ಬಹುಮಾನವನ್ನು ಪಡೆದುಕೊಂಡರು.

ನಂತರ ನಡೆದ ಗುಂಪು ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ (ಎ) ವಿಭಾಗ ಪ್ರಥಮ, ಪ್ರಥಮ ಪಿ.ಯು.ಸಿ ವಿಜ್ಞಾನ (ಎ) ವಿಭಾಗ ದ್ವಿತೀಯ ಮತ್ತು ದ್ವಿತೀಯ ಪಿ.ಯು.ಸಿ ವಾಣಿಜ್ಯ (ಸಿ) ಹಾಗೂ (ಡಿ) ವಿಭಾಗ ತೃತೀಯ ಬಹುಮಾನ ಪಡೆದುಕೊಂಡರು

ಪಾರಂಪರಿಕ ಉಡುಪಿನ ಸ್ಪರ್ಧೆಯ ನಿರ್ಣಾಯಕರಾಗಿ ಶಿವಾನಿ ಶಾಂತಾರಾಮ, ರಿತಿಕಾ ಕಿಣಿ, ವಿನುತಾ ನಾಯ್ಕ ಹಾಗೂ ಗುಂಪು ನೃತ್ಯ ಸ್ಪರ್ಧೆಯ ನಿರ್ಣಾಯಕರಾಗಿ ಸಲ್ಮಾನ, ನಂದಿತಾ ಕಾಮತ ಮತ್ತು ಜಗದೀಶ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಅಧ್ಯಕ್ಷತೆ ವಹಿಸಿದ್ದು, ಉಪನ್ಯಾಸಕ ಶಿವಾನಂದ ಭಟ್ ನಿರೂಪಿಸಿದರು. ನಾಗೇಂದ್ರ ಪೈ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.