ಭಾನುವಾರ ಮಧ್ಯಾಹ್ನ ನಾಲ್ವರು ಸೇರಿ ರಾಮನಗರ ಸಮೀಪದ ನಾಂದ್ರೇಕರ ಸೇತುವೆ ಬಳಿ ಪಾಂಡರಿ ನದಿಯಲ್ಲಿ ಈಜಲು ತೆರಳಿದ್ದರು. ಇಬ್ಬರು ನೀರಿನಲ್ಲಿ ಸ್ನಾನಕ್ಕೆ ಇಳಿದು ಹೊರಗಡೆ ಬಾರದಿದ್ದಾಗ, ಇನ್ನಿಬ್ಬರು ಮನೆಗೆ ಬಂದು ಅವರು ಮುಳುಗಿದ ವಿಷಯ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಪೋಲಿಸರಿಗೆ ಮಾಹಿತಿ ನೀಡಿದ್ದು ರಾಮನಗರ ಪೋಲಿಸರು ಶವಗಳನ್ನು ನೀರಿನಿಂದ ಹೊರ ತೆಗೆದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.