ಮನೆಯ ಗೋಡೆ ಕುಸಿದು ಇಬ್ಬರು ಸಾವು

ಅಂಕೋಲಾ: ತಾಲ್ಲೂಕಿನ ಭಾವಿಕೇರಿಯ ಜೋಡುಕಟ್ಟೆ ಬಳಿ ಮಧ್ಯಾಹ್ನ ಮನೆಯೊಂದರ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿಗಳಾದ ಮಧುಕರ ಸುಬ್ರಾಯ ನಾಯಕ (55) ಮತ್ತು ಶಾಂತಾರಾಮ ನಾರಾಯಣ ನಾಯಕ (62) ಮೃತರು.
ಮಧುಕರ ಅವರ ಹಳೆಯ ಮನೆಯನ್ನು ತೆರವುಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗೋಡೆ ಕುಸಿದು ಇಬ್ಬರು ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದರು. ಇಬ್ಬರನ್ನೂ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಶಾಂತಾರಾಮ ನಾಯಕ ಅವರು ಮಿರ್ಜಾನ್ ಸಮೀಪ ಮತ್ತು ಮಧುಕರ ಅವರು ಬೈಂದೂರು ಸಮೀಪ ಕೊನೆಯುಸಿರೆಳೆದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.