ಕುಮಟಾ: ‘ಭಾರತೀಯ ಕಾಲ ಗಣನೆ ಆಚರಣೆಗೆ ತರುವ ಉದ್ದೇಶದಿಂದ ಯುಗಾದಿ ಉತ್ಸವ ಸಮಿತಿ ವತಿಯಿಂದ ಮಾರ್ಚ್ 19ರಂದು ಪಟ್ಟಣದ ಗಿಬ್ ಪ್ರೌಢ ಶಾಲೆ ಮೈದಾನದಲ್ಲಿ ಯುಗಾದಿ ಉತ್ಸವ ಏರ್ಪಡಿಸಲಾಗಿದೆ’ ಎಂದು ಸಮಿತಿ ಸಂಚಾಲಕ ಮುರಳಿಧರ ಪ್ರಭು ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊನ್ನಾವರ ತಾಲ್ಲೂಕಿನ ಕೊಂಡಾಕುಳಿ ಓಂಕಾರಾಶ್ರಮದ ಶಿವಾತ್ಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾರ್ಚ್ 14ರಂದು ಭಜನಾ ಸಪ್ತಾಹದ ಬದಲು ಭಜನೆ ಪ್ರದರ್ಶನ ಜರುಗಲಿದೆ’ ಎಂದು ತಿಳಿಸಿದರು.

ಮಾರ್ಚ್ 18ರಂದು ಮಧ್ಯಾಹ್ನ 3ಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಕೊಂಕಣ ಎಜುಕೇಶನ್ ಟ್ರಸ್ಟ್ ಹಾಗೂ ಜಾನಕಿ ಪ್ರಭು ಅಕಾಡೆಮಿ ವತಿಯಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃಷಿ ವಿಚಾರ ಸಂಕಿರಣ, ಶಂಕರ ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಹೆಗಡೆ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಜಿ.ಎಸ್. ಹೆಗಡೆ, ಎಂ.ಕೆ. ಶಾನಭಾಗ, ಬಿ.ಎನ್.ಕೆ ನಾಗರಾಜ, ಎಸ್.ವಿ. ಹೆಗಡೆ, ಅರುಣ ಹೆಗಡೆ, ಎಂ.ಆರ್. ಭಟ್ಟ, ಸುರೇಶ ಭಟ್ಟ, ಗಜಾನನ ಮಡಿವಾಳ, ಶೀಥಲ ಭಂಡಾರಿ, ಪೂರ್ಣಿಮಾ ಕಾಮತ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.