ಜೊಯಿಡಾ: ತಾಲ್ಲೂಕಿನ ಗಣೇಶಗುಡಿಯ ಇಳವಾದಲ್ಲಿ ಗೋ ಹತ್ಯೆ ಮಾಡಿ ಹಿಂದೂ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ನಾಗರಿಕರು ಮತ್ತು ಗೋ ರಕ್ಷಕರು ಶನಿವಾರ ಜೊಯಿಡಾ ಉಪ ತಹಶೀಲ್ದಾರ್ ಸಂಜೀವ ಭಜಂತ್ರಿ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಳವಾದ ರೆಡ್ಡಿ ಕ್ಯಾಂಪ್ ಪ್ರದೇಶದಲ್ಲಿ ಅನ್ಯ ಕೋಮಿಗೆ ಸೇರಿದ ಜನರು ತಮ್ಮ ಮನೆಯ ಆವರಣದಲ್ಲಿ ಕಸಾಯಿಖಾನೆಯನ್ನು ಮಾಡಿ ಗೋ ಹತ್ಯೆ ಮಾಡುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ. ಸೂಪಾ ಅಣೆಕಟ್ಟು ನಿರ್ಮಾಣ ಗೊಳ್ಳುವ ಪೂರ್ವದಲ್ಲಿ ಇದ್ದ ಕಾಳೇಶ್ವರ ದೇವಸ್ಥಾನದ ಪಕ್ಕದಲ್ಲಿ ಈ ಘಟನೆ ನಡೆಯುತ್ತಿದ್ದು ಇದು ಸಮಗ್ರ ಹಿಂದೂ ಜನರ ಭಾವನೆಗಳಿಗೆ ಬರೆ ಎಳೆದಂತಾಗಿದೆ. ಜೊತೆಗೆ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಮೂಲವಾಗಿರುವ ಪವಿತ್ರ ನದಿ ಕಾಳಿ ನದಿಗೆ ಹತ್ಯೆ ಮಾಡಲಾದ ಗೋವುಗಳ ಕಳೆಬರಹವನ್ನು ಎಸೆಯಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಇಳವಾದ ಚಾಂದ ಕುಟ್ಟಿ ಮತ್ತು ಅವರ ತಮ್ಮ ರಫೀಕ್ ಕುಟ್ಟಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದ ಸೌಹಾರ್ದತೆಯನ್ನು ಹಾಳು ಮಾಡುವ ಇವರನ್ನು ಗಡೀಪಾರು ಮಾಡಬೇಕು. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ ಜೊಯಿಡಾ ತಾಲ್ಲೂಕಿನ ಸಮಗ್ರ ಹಿಂದೂಗಳು ಒಂದಾಗಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖರಾದ ಅರುಣ ಕಾಮ್ರೆಕರ, ಪ್ರವಿಣ ದೇಸಾಯಿ, ಸಂತೋಷ ಸಾವಂತ, ಕಮಲಾಕರ ದೇಸಾಯಿ, ಸುಬೆಂದು ಕಾಮತ, ಸುಭಾಷ ಮಾಂಜ್ರೇಕರ, ಮಾರುತಿ ನಾಯ್ಕ, ಅನಿಲ ಪಟ್ಟೆ, ಚಂದ್ರಕಾಂತ ದೇಸಾಯಿ, ಸಂದೀಪ ಗಾವಡಾ, ಸುಷ್ಮಾ ಮೀರಾಶಿ ಇದ್ದರು.

ಜೊಯಿಡಾ ತಾಲ್ಲೂಕಿನ ಗಣೇಶಗುಡಿಯ ಇಳವಾದಲ್ಲಿ ಮನೆಯ ಹಿತ್ತಲಲ್ಲಿ ಹತ್ಯೆ ಮಾಡಲಾದ ದನದ ಮಾಂಸ ಮತ್ತು ತಲೆ ಶುಕ್ರವಾರ ಸ್ಥಳೀಯರು ಪತ್ತೆ ಹಚ್ಚಿ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ರಾಮನಗರ ಪೊಲೀಸರು ಚಾಂದ ಕುಟ್ಟಿ ಮತ್ತು ರಫೀಕ್ ಕುಟ್ಟಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-20-705074466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.