ಶಿರಸಿ: ಅಡಿಕೆ, ಕಾಳುಮೆಣಸು, ತೆಂಗು ಸೇರಿ ದೀರ್ಘಾವಧಿ ಬೆಳೆಗಳ ಪ್ರತಿ ವರ್ಷ ಸಮೀಕ್ಷೆಯ ಬದಲಾಗಿ 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸುವಂತೆ ಕಂದಾಯ ಇಲಾಖೆಯಿಂದ 2021ರಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಸರ್ಕಾರ ಮಟ್ಟದಲ್ಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಾರಣ ಪ್ರಸಕ್ತ ವರ್ಷವೂ ಜಿಲ್ಲೆಯ ಕೃಷಿಕರು ಅನಿವಾರ್ಯವಾಗಿ ತಾಂತ್ರಿಕ ಸಂಕಷ್ಟಕ್ಕೆ ಸಿಲುಕುವ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪ್ರತಿ ವರ್ಷ ಜೂನ್, ಜುಲೈ ತಿಂಗಳಲ್ಲಿ ಸಮೀಕ್ಷೆ ಆರಂಭ ಆಗುತ್ತದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ರೈತರು ಅಥವಾ ಖಾಸಗಿ ನಿವಾಸಿಗಳು ಬೆಳೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ. ಈ ಮಾಹಿತಿಯು ಕಂದಾಯ ಇಲಾಖೆಯ ಸರ್ವರ್ಗೆ ರವಾನೆಯಾಗಿ, ಅಲ್ಲಿಂದ ಪಹಣಿಯ ಅಂಕಣ 13ರಲ್ಲಿ ದಾಖಲಾಗಬೇಕು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಪಹಣಿಯಲ್ಲಿ ಬೆಳೆ ದಾಖಲಾಗುವ ಹಂತದಲ್ಲಿ ತಾಂತ್ರಿಕ ಲೋಪಗಳು ಹಲವಾರು ವರ್ಷಗಳಿಂದ ಮರುಕಳಿಸುತ್ತಲೇ ಇವೆ. ಅನೇಕ ರೈತರ ಪಹಣಿಗಳಲ್ಲಿ ಬೆಳೆ ವಿವರ ಲಭ್ಯವಿಲ್ಲ ಅಥವಾ ತಪ್ಪು ಬೆಳೆಗಳ ಹೆಸರು ನಮೂದಾಗುತ್ತಿದ್ದು, ಸಾಕಷ್ಟು ಗೊಂದಲಗಳಿಗೆ ಕಾರಣವಾಗುತ್ತಿದೆ.

‘ಜಿಲ್ಲೆಯ ಬನವಾಸಿ ಹೋಬಳಿ, ಮುಂಡಗೋಡ ಭಾಗದಲ್ಲಿ ಬೆಳೆಗಳು ಕಾಲಕಾಲಕ್ಕೆ ಬದಲಾಗುತ್ತವೆಯಾದರೂ, ಉಳಿದ ಕಂದಾಯ ವಲಯಗಳಲ್ಲಿ ದಶಕಗಳಿಂದ ಅಡಿಕೆ ಹಾಗೂ ತೋಟಗಾರಿಕಾ ಬೆಳೆಗಳೇ ಪ್ರಧಾನವಾಗಿವೆ. ಹೀಗಿದ್ದರೂ ಮುಖ್ಯ ಬೆಳೆ ಮತ್ತು ಮಿಶ್ರ ಬೆಳೆ ಎಂದು ಗುರುತಿಸುವಲ್ಲಿ ತಂತ್ರಾಂಶದಲ್ಲಿ ತಾಂತ್ರಿಕ ಅಡಚಣೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಒಮ್ಮೆ ಬೆಳೆ ದಾಖಲಿಸಿದರೆ ಹಲವು ವರ್ಷಗಳ ಕಾಲ ಆದಾಯ ನೀಡುವ ದೀರ್ಘಾವಧಿ ಬೆಳೆಗಳಿಗೆ ಪ್ರತಿ ವರ್ಷ ಸಮೀಕ್ಷೆ ನಡೆಸುವ ಪದ್ಧತಿಯನ್ನು ಬದಲಿಸಬೇಕು ಎಂದು 2021ರಲ್ಲಿ, ತಾಲ್ಲೂಕು ಪಂಚಾಯಿತಿಯಲ್ಲಿ ಠರಾವು ಮಾಡಿಸಿ, ಶಿರಸಿ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ ವರ್ಷಗಳು ಉರುಳಿದರೂ ಸರ್ಕಾರದ ಮಟ್ಟದಲ್ಲಿ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಇದು ರೈತರ ಸಮಸ್ಯೆ ಹೆಚ್ಚಲು ಕಾರಣವಾಗುತ್ತಿದೆ’ ಎಂಬ ಆರೋಪ ಬೆಳೆಗಾರರದ್ದಾಗಿದೆ.

‘ವಿಶೇಷವಾಗಿ ಅಡಿಕೆ, ಕಾಳುಮೆಣಸಿನಂತಹ ತೋಟಗಾರಿಕಾ ಬೆಳೆಗಳ ವಿವರ ದಾಖಲಿಸುವಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರುತ್ತಿದೆ. ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿಲ್ಲದಿದ್ದರೆ ಹವಾಮಾನ ಆಧಾರಿತ ಬೆಳೆ ವಿಮೆ ಜಮೆ, ಬೆಂಬಲ ಬೆಲೆ ಯೋಜನೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ದೊರೆಯುವ ಪರಿಹಾರ ಧನ ಪಡೆಯಲು ಅಸಾಧ್ಯವಾಗುತ್ತದೆ. ಬ್ಯಾಂಕ್ಗಳಲ್ಲಿ ಕೃಷಿ ಸಾಲ ನವೀಕರಣಕ್ಕೂ ಪಹಣಿಯಲ್ಲಿನ ಬೆಳೆ ವಿವರವೇ ಮಾನದಂಡ ಆಗಿರುವುದರಿಂದ, ತಾಂತ್ರಿಕ ದೋಷವು ರೈತರ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಕೃಷಿಕ ನಿರಂಜನ ಹೆಗಡೆ.

‘ಅಡಿಕೆ ತೋಟಗಳಲ್ಲಿ ಕಾಳುಮೆಣಸು, ಕಾಫಿ ಹಾಗೂ ಇನ್ನಿತರ ಮಿಶ್ರ ಬೆಳೆಗಳನ್ನು ಸಮರ್ಪಕವಾಗಿ ದಾಖಲಿಸದ ಕಾರಣ ಬೆಳೆ ವಿಮೆ ಹಾಗೂ ಅಕಾಲಿಕ ಮಳೆಯಂತಹ ಸಂದರ್ಭದಲ್ಲಿ ಸಿಗುವ ಪರಿಹಾರದಿಂದ ರೈತರು ವಂಚಿತರಾಗುತ್ತಿದ್ದಾರೆ. ಸರ್ಕಾರದ ವಿಳಂಬ ನೀತಿಯಿಂದಾಗಿ ರೈತರು ಪ್ರತಿ ವರ್ಷ ಪಹಣಿ ತಿದ್ದುಪಡಿಗಾಗಿ ಕಚೇರಿಗಳಿಗೆ ಅಲೆಯುವಂತಾಗಿದ್ದು, ಕೂಡಲೇ ಈ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರಬೇಕು’ ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-681156453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.