ಶಿರಸಿ: ‘ಅರಣ್ಯ ಇಲಾಖೆಯು ಪ್ರತಿವರ್ಷ ನೆಡುವ ಗಿಡಗಳಲ್ಲಿ ಎಷ್ಟು ಸಸಿಗಳು ಬದುಕಿಕೊಂಡಿವೆ ಎಂಬ ನೈಜ ಪರಿಶೀಲನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ತನ್ನ ದಕ್ಷತೆ ಸಾಬೀತುಪಡಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಪರಿಸರ ಸಾಂದ್ರತೆ ಮತ್ತು ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶದಿಂದ ಇಲಾಖೆ ಕೈಗೊಳ್ಳುತ್ತಿರುವ ನೆಡುತೋಪು ಕಾಮಗಾರಿಗಳು ವ್ಯಾಪಕ ಟೀಕೆ ಮತ್ತು ಸಂಶಯಗಳಿಗೆ ಕಾರಣವಾಗಿದ್ದು, ಈ ಯೋಜನೆಯಡಿ ಲೆಕ್ಕಕ್ಕೆ ತೋರಿಸಲಾದ ಕೋಟ್ಯಂತರ ರೂಪಾಯಿ ಹಣದ ವಿವರ ಎಲ್ಲಿದೆ? ಕೋಟಿ ಹೊಂಡಗಳು ಎಲ್ಲಿವೆ? ನೆಟ್ಟಿದ್ದು ಎಷ್ಟು ಮತ್ತು ಬದುಕಿದ್ದು ಎಷ್ಟು ಗಿಡಗಳು ಎಂಬುದನ್ನು ಇಲಾಖೆ ಬಹಿರಂಗಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯ ಅಡಿಯಲ್ಲಿ ಕಾಮಗಾರಿ ಸೂಚನಾ ಫಲಕಗಳಲ್ಲಿ ಪಾರದರ್ಶಕತೆಯನ್ನು ಕಡೆಗಣಿಸಲಾಗಿದೆ. ವರ್ಷದಿಂದ ವರ್ಷಕ್ಕೆ ನೆಟ್ಟ ಗಿಡಗಳಲ್ಲಿ ಬದುಕಿರುವ ಸಸಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ನಿಯಮ ಇಲಾಖೆಯಲ್ಲಿದ್ದು, ಇದನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ನೆಡುತೋಪುಗಳಲ್ಲಿ ಬದುಕಿರುವ ಗಿಡಗಳಿಗಿಂತ ಸತ್ತಿರುವ ಗಿಡಗಳ ಸಂಖ್ಯೆಯು ಹೆಚ್ಚಾಗಿ ಕಾಣಸಿಗುತ್ತಿದೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-20-264159328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.