ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿರುವ ಕೆರೆಗೆ ಎರಡು ಖಾಸಗಿ ಕಂಪನಿಗಳ ರಾಸಾಯನಿಕಯುಕ್ತ ಕಲುಷಿತ ನೀರು ಹರಿದು ಬರುತ್ತಿದ್ದು ಪರಿಣಾಮ ಕೆರೆಯ ನೀರು ಬಳಕೆಗೆ ಯೋಗ್ಯವಿಲ್ಲದಷ್ಟು ವಿಷಯುಕ್ತವಾಗಿದೆ ಎಂಬ ಆರೋಪವಿದೆ.

‘ಕಲುಷಿತಗೊಂಡಿರುವ ಕೆರೆಯ ನೀರನ್ನು ಸೇವಿಸುವುದರಿಂದ ಗ್ರಾಮದಲ್ಲಿ ಚರ್ಮರೋಗ ಸೇರಿದಂತೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವ ಜೊತೆಗೆ ಜಾನುವಾರುಗಳು ಸಾವನ್ನಪ್ಪುತ್ತಿವೆ’ ಎಂಬುದು ಗ್ರಾಮಸ್ಥರ ಆರೋಪ.

‘ಹೊಸಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಲಾಗಾಯ್ತಿನಿಂದಲೂ ತಮ್ಮ ದಿನನಿತ್ಯದ ಚಟುವಟಿಕೆಗೆ ಹೊಸಳ್ಳಿಕೆರೆಯ ನೀರನ್ನೇ ಬಳಸುತ್ತ ಬಂದಿದ್ದಾರೆ. ಕೆರೆಯ ನೀರು ವಿಷಯುಕ್ತವಾಗಿರುವ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ಜನರಿಗೆ ಚರ್ಮರೋಗ ಕಂಡುಬರುತ್ತಿದೆ. ಜಲಚರಗಳು ಸಾವನ್ನಪ್ಪುತ್ತಿವೆ’ ಎಂದು ಹೊಸಳ್ಳಿ ಗ್ರಾಮದ ನಿವಾಸಿಯೊಬ್ಬರು ದೂರಿದರು.

‘ಹೊಸಳ್ಳಿ ಭಾಗದಲ್ಲಿ ಸದಾ ನೀರಿನ ತೊಂದರೆ ಇದೆ. ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕೆರೆಯ ಅಕ್ಕಪಕ್ಕದಲ್ಲಿ ಕೊಳವೆಬಾವಿ ಕೊರೆಸಿದ್ದು ಕೊಳವೆ ಬಾವಿಯ ನೀರು ಸಹಿತ ಕುಡಿಯಲು ಯೋಗ್ಯವಾಗಿಲ್ಲ. ಅರಣ್ಯದ ಕಾಲುವೆಗಳಲ್ಲಿಯೂ ಈ ಕಲುಷಿತ ನೀರು ಸಂಗ್ರಹವಾಗುತ್ತಿದ್ದು ಮೇಯಲು ಬೆಟ್ಟಕ್ಕೆ ಹೋದ ಜಾನುವಾರುಗಳು ಈ ನೀರನ್ನು ಕುಡಿದು ರೋಗಗ್ರಸ್ಥವಾಗುತ್ತಿವೆ’ ಎಂದು ಸ್ಥಳೀಯರು ಹೇಳಿದ್ದಾರೆ.

ಬಾವಿ-ಕೆರೆಗಳಿಂದ ಸಂಗ್ರಹಿಸಿದ ನೀರು ನೊರೆಗಳಿಂದ ಕೂಡಿದೆ. 3 ಕಿ.ಮೀ ದೂರದಿಂದ ಜನ ನೀರಿಗಾಗಿ ಇಲ್ಲಿ ಬರುತ್ತಾರೆ. ಗ್ರಾಮ ಪಂಚಾಯಿತಿ ನಾಲ್ಕು ದಿನಕ್ಕೆ ಒಮ್ಮೆ ಗ್ರಾಮಸ್ಥರಿಗೆ ನೀರು ಪೂರೈಸುತ್ತಿದೆ. ಆ ನೀರು ಕುಡಿಯಲು ಯೋಗ್ಯವಿಲ್ಲ. ನೀರಿನ ಬಣ್ಣ ಹಾಗೂ ವಾಸನೆ ಬದಲಾಗಿದ್ದು, ರಾಸಾಯನಿಕ ಮಿಶ್ರಣದ ಹಾಗೇ ಭಾಸವಾಗುತ್ತದೆ’ ಎಂಬುದು ಜನರ ಆರೋಪ.

‘ಹೊಸಳ್ಳಿ ಕೆರೆಯ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಇನ್ನಷ್ಟೆ ಬರಬೇಕಿದೆ’ ಎಂದು ಕಿರವತ್ತಿ ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ವಿರಕ್ತಿಮಠ ಪ್ರತಿಕ್ರಿಯಿಸಿದರು.

ಬಳಕೆಗೆ ಯೋಗ್ಯವಲ್ಲ ಎಂದು ವರದಿ

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆಯು ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ನೀರಿನ ಮಾದರಿ ಸಂಗ್ರಹಿಸಿದೆ. ಈ ನೀರಿನಲ್ಲಿ ಕರಗದ ಕ್ಷಾರೀಯ ಪದಾರ್ಥಗಳ ಪ್ರಮಾಣವು ಅನುಮತಿಸುವ ಮಿತಿಗಿಂತ ಹೆಚ್ಚಿದ್ದು ನೀರು ಕುಡಿಯಲು ಯೋಗ್ಯವಿಲ್ಲ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವರದಿ ನೀಡಿದೆ. ಕಾರ್ಖಾನೆ ಪಕ್ಕದಲ್ಲಿನ ಕಾಲುವೆ ನೇರವಾಗಿ ಕೆರೆಗೆ ಸಂಪರ್ಕ ಕಲ್ಪಿಸಿದೆ. ಕೆರೆಯ ಅಕ್ಕಪಕ್ಕದಲ್ಲಿ 8 ಎಕರೆ ಕೃಷಿಭೂಮಿ ಇದ್ದು ಕಲುಷಿತ ನೀರು ಹರಿದಲ್ಲಿ ನೀರಿನ ರಸಸಾರ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವರದಿ ನೀಡಿದ್ದಾರೆ. ಈ ನೀರು ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿಲ್ಲ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾರ್ಖಾನೆಯ ಕಲುಷಿತ ನೀರು ನೀರು ಕೆರೆಗೆ ಸೇರಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೇನಾದರೂ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ
ಬಿ.ಕೆ.ಸಂತೋಷ್, ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.