ಕಾರವಾರ: ಸಮೃದ್ಧ ಅರಣ್ಯ, ಸ್ವಚ್ಛಂದವಾಗಿ ಹರಿಯುವ ನದಿಗಳಿರುವ ನೆಲ ಈಗ ಬಿಸಿಲ ಝಳಕ್ಕೆ ಕಾದ ಕಾವಲಿಯಾಗಿದೆ. ಮರಗಳ ನೆರಳು ಸಿಗದೆ ನಗರ ಪ್ರದೇಶದಲ್ಲಿ ಜನರು ಕಂಗೆಟ್ಟಿದ್ದರೆ, ಹಳ್ಳಿಗಳಲ್ಲಿನ ಕೃಷಿ ಭೂಮಿ ಒಣಗಿ ರೈತರ ಆತಂಕ ಹೆಚ್ಚಿಸಿದೆ.

ಈ ಬಾರಿಯ ಬೇಸಿಗೆ ಜಿಲ್ಲೆಯ ಜನತೆಯನ್ನು ಕಂಗೆಡುವಂತೆ ಮಾಡಿದೆ. ಕರಾವಳಿ ಭಾಗದಲ್ಲಿ ಆರ್ದೃತೆ ಪ್ರಮಾಣ ಅಧಿಕವಾಗಿರುವ ಕಾರಣಕ್ಕೆ ಸೆಕೆ ಹೆಚ್ಚಿದ್ದರೆ, ಮಲೆನಾಡು, ಅರೆ ಮಲೆನಾಡು ಪ್ರದೇಶದಲ್ಲಿ ವಿಪರೀತ ಬಿಸಿಲ ಝಳ ಕೃಷಿ ಕ್ಷೇತ್ರವನ್ನು ನಲುಗಿಸಿದೆ.

ರಸ್ತೆ ವಿಸ್ತರಣೆ, ಕಟ್ಟಡಗಳ ನಿರ್ಮಾಣಕ್ಕೆ ನಗರ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಮರಗಳನ್ನು ಕತ್ತರಿಸಲಾಗಿದೆ. ಕಳೆದ ಮಳೆಗಾಲದಲ್ಲಿ ಕಾರವಾರ ನಗರದಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನೆಪದಲ್ಲಿ ದೊಡ್ಡ ಗಾತ್ರದ ಹಲವು ಮರಗಳನ್ನು ಬುಡ ಸಹಿತ ಕಡಿಯಲಾಗಿತ್ತು. ಅವುಗಳ ಪೈಕಿ ಹಲವು ಇನ್ನೂ ಚಿಗುರು ಹಂತದಲ್ಲೇ ಇವೆ. ಬಿಸಿಲಿಗೆ ನೆರಳು ನೀಡುತ್ತಿದ್ದ ಇಲ್ಲಿನ ಹಬ್ಬುವಾಡಾ ರಸ್ತೆ, ಪಿಕಳೆ ರಸ್ತೆಯಲ್ಲಿನ ಮರಗಳು ಕಣ್ಮರೆ ಆಗಿದ್ದರಿಂದ ವ್ಯಾಪಾರಿಗಳು ಕಂಗೆಟ್ಟಿದ್ದಾರೆ.

‘ಶೇ 79ರಷ್ಟು ಅರಣ್ಯ ಭೂಮಿ ಇದೆ ಎಂಬುದು ಕೇವಲ ದಾಖಲೆಯಲ್ಲಷ್ಟೆ. ಬೃಹತ್ ಯೋಜನೆಗಳನ್ನು ಜಿಲ್ಲೆಯ ಮೇಲೆ ಹೇರಿದ ಪರಿಣಾಮ ಸಮೃದ್ಧ ಪರಿಸರ ನಾಶವಾಗಿದೆ. ಕಳೆದೊಂದು ದಶಕದಿಂದ ಈಚೆಗೆ ಬಿಸಿಲ ಝಳ ಹೆಚ್ಚಿರುವುದು ಇದಕ್ಕೆ ನಿದರ್ಶನ. ಸತತ ಮಳೆ, ಬೇಸಿಗೆಯಲ್ಲೂ ತಂಪಾಗಿರುತ್ತಿದ್ದ ಜಿಲ್ಲೆಯ ಹಲವು ಪ್ರದೇಶಗಳು ಈಗ ಬಯಲುಸೀಮೆಯಷ್ಟು ಸೆಕೆ ಕಾಣುತ್ತಿವೆ’ ಎಂಬುದಾಗಿ ಪರಿಸರವಾದಿಗಳು ಹೇಳುತ್ತಾರೆ.

ಶಿರಸಿ ತಾಲ್ಲೂಕಿನ ಪೂರ್ವ ಭಾಗವಾದ ಬನವಾಸಿ ಹೋಬಳಿಯಲ್ಲಿ ಈ ಬಾರಿ ಬಿಸಿಲ ತಾಪಕ್ಕೆ ಜೀವನದಿ ವರದಾ ಬತ್ತಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ತೀವ್ರ ಅಭಾವ ಎದುರಾಗಿದೆ. ಕೆಲವೆಡೆ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೇ ಕೃಷಿ ಭೂಮಿಯನ್ನು ಹಾಗೆಯೇ ಬಿಡಲಾಗಿದೆ.

‘ಶಾಲ್ಮಲಾ ಹಾಗೂ ಅಘನಾಶಿನಿ ನದಿ ತಟದಲ್ಲೂ ನೀರಿನ ತುಟಾಗ್ರತೆ ಎದುರಾಗಿದ್ದು, ಸಮಯಕ್ಕೆ ಸರಿಯಾಗಿ ನೀರು ನೀಡಲಾಗದೇ ಅಡಿಕೆ ಮರಗಳ ಎಲೆಗಳು ಬಾಡುವ ಹಂತ ತಲುಪಿವೆ’ ಎನ್ನುತ್ತಾರೆ ಹುಲೇಕಲ್ನ ಕೃಷಿಕ ಮಧುಕೇಶ್ವರ ಹೆಗಡೆ.

ಮುಂಡಗೋಡ ತಾಲ್ಲೂಕಿನಲ್ಲಿ ಮೇ ತಿಂಗಳ ಬಿಸಿಲು ಕೃಷಿ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತಾಲ್ಲೂಕಿನ ಬಹುಪಾಲು ಕೃಷಿ ಕ್ಷೇತ್ರವನ್ನು ಆವರಿಸಿರುವ ವಾಣಿಜ್ಯ ಬೆಳೆಗಳು ನೀರಿನ ತುಟಾಗ್ರತೆಯಿಂದ ಬಾಡುವ ಹಂತಕ್ಕೆ ಬಂದಿವೆ. ಅಡಿಕೆ, ತೆಂಗು, ಶುಂಠಿ ಬೆಳೆಗಳಿಗೆ ನೀರುಣಿಸಲು ಹರಸಾಹಸ ಪಡುವಂತಾಗಿದೆ. ಕೊಳವೆಬಾವಿಗಳು ನೀರು ಚೆಲ್ಲುವುದಕ್ಕೆ ಪ್ರಯಾಸಪಡುತ್ತಿವೆ ಎಂದು ರೈತ ಮಂಜುನಾಥ ಹರಮಲಕರ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಹಳ್ಳಗಳಲ್ಲಿ ಈ ಸಲ ನೀರಿನ ಹರಿವು ಬೇಗನೆ ಕಡಿಮೆಯಾಗಿದೆ ಅಥವಾ ನಿಂತು ಹೋಗಿದೆ. ತಾರಗಾರ, ಬೀಗಾರ, ಬಾಗಿನಕಟ್ಟಾ ಹಾಗೂ ಗೌರಾಳ ಭಾಗದ ಕೃಷಿಕರು ಬೀಗಾರ ಹಳ್ಳದ ನದಿ ನೀರನ್ನೇ ಆಶ್ರಯಿಸಿದ್ದಾರೆ. ಆದರೆ ಈ ಸಲ ನೀರು ತುಂಬಾ ಕಡಿಮೆ ಆಗಿದೆ. ಕಾಲುವೆಯಲ್ಲಿ ನೀರೆ ಹರಿಯುತ್ತಿಲ್ಲ ಎಂಬ ಬೇಸರ ಗ್ರಾಮಸ್ಥರದ್ದು. ಮಾಗೋಡು ಜಲಪಾತಕ್ಕೆ ಸೇರುವ ಚಿನಗಾರ ಹಳ್ಳದಲ್ಲಿ ಈ ಸಲ ವಾಡಿಕೆಗಿಂತ ತೀರ ಮೊದಲೇ ನೀರು ಬತ್ತಿ ಹೋಗಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಹಳ್ಳದ ನೀರು ಸಮುದ್ರ ಸೇರುವುದನ್ನು ತಡೆಯಲು ಕಿಂಡಿ ಆಣೆಕಟ್ಟು ಹಾಗೂ ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ಮಿಸಿದ ನಂತರ ಸರಿಯಾಗಿ ನಿರ್ವಹಣೆಯಿಲ್ಲದೆ ಹೂಳು ತೆಗೆಯದೆ ಇರುವುದರಿಂದ ಬೇಸಿಗೆಯಲ್ಲಿ ಸಂಪೂರ್ಣ ಕೆರೆಗಳು ಬತ್ತಿವೆ ಎನ್ನುತ್ತಾರೆ ರೈತ ಶಂಕರ್ ಗೌಡ.

ಹೊನ್ನಾವರ ತಾಲ್ಲೂಕಿನಲ್ಲಿ ಹರಿಯುವ ಗುಂಡಬಾಳಾ ನದಿ, ಭಾಸ್ಕೇರಿ ಹಳ್ಳ ಬೇಸಿಗೆಯಲ್ಲಿ ಒಣಗುತ್ತಿದ್ದು ನದಿ ಹಾಗೂ ಹಳ್ಳದ ಗುಂಟ ಅಕ್ರಮವಾಗಿ ಜೋಡಿಸಿರುವ ಸಾವಿರಾರು ಎಚ್.ಪಿ.ಪಂಪ್ಸೆಟ್ಗಳು ಇದಕ್ಕೆ ಕಾರಣ ಎಂಬುದು ಜನರ ಆರೋಪ. ಅರಣ್ಯ ಒತ್ತುವರಿ ಭೂಮಿ ಸೇರಿದಂತೆ ಹಲವೆಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಇದರಿಂದ ಸಮೀಪದ ಕೆರೆ-ಬಾವಿಗಳು ಬರಡಾಗುತ್ತಿವೆ.

‘ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆಗೆಂದು ಕೊರೆಸಿದ ಕೊಳವೆ ಬಾವಿಗೆ ಪೈಪ್ಲೈನ್ ಅಳವಡಿಸಿ ಕೆಲವರು ಅಡಿಕೆ ತೋಟಕ್ಕೆ ನೀರುಣಿಸುತ್ತಿರುವುದರಿಂದ ನಮ್ಮ ಬಾವಿಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ’ ಎಂದು ಹೆರಾವಲಿ ಗ್ರಾಮದ ಬಡ್ನಕೋಡ್ಲ ಮಜರೆಯ ಕೃಷಿಕರೋರ್ವರು ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-1135188836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.