ಕಾರವಾರ: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರದಲ್ಲಿ ಜಿಲ್ಲೆಯಿಂದ ಸಚಿವರು ಯಾರಾಗಬಹುದು ಎಂಬ ಜನರ ಕುತೂಹಲಕ್ಕೆ ಉತ್ತರ ಸಿಗಲಿಲ್ಲ.

ಮೊದಲ ಹಂತದಲ್ಲಿ ಮುಖ್ಯಮಂತ್ರಿ ಅವರ ಜೊತೆ 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ, ಅವರ ಪೈಕಿ ಜಿಲ್ಲೆಯವರಿಗೆ ಅವಕಾಶ ಸಿಕ್ಕಿಲ್ಲ ಎಂಬ ಬೇಸರ ಜಿಲ್ಲೆಯ ಜನರಲ್ಲಿದೆ.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿಯಿಂದ ಗೆಲುವು ಸಾಧಿಸಿರುವ ಶಿವರಾಮ ಹೆಬ್ಬಾರ ಕಾಂಗ್ರೆಸ್ಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ನಾಲ್ವರು ಶಾಸಕರ ಪೈಕಿ ಒಬ್ಬರಿಗಾದರೂ ಸಚಿವ ಹುದ್ದೆ ಮೊದಲ ಪ್ರಯತ್ನದಲ್ಲೇ ಸಿಗಬಹುದು ಎಂಬ ಪಕ್ಷದ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

‘ಹೊಸ ಸಂಪುಟದಲ್ಲಿ ಸೇರ್ಪಡೆಯಾಗಿರುವ ಸಚಿವರ ಪೈಕಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಶಾಸಕರೇ ಹೆಚ್ಚಿನವರಿದ್ದಾರೆ. ಭೌಗೋಳಿಕವಾಗಿ ವಿಶಾಲವಾಗಿರುವ ಉತ್ತರ ಕನ್ನಡದಂತ ಜಿಲ್ಲೆಗೆ ಕನಿಷ್ಠ ಒಂದು ಹುದ್ದೆಯನ್ನಾದರೂ ಮೊದಲ ಹಂತದಲ್ಲೇ ನೀಡಬಹುದಿತ್ತು. ಆದರೆ, ಸಚಿವ ಹುದ್ದೆ ಗಿಟ್ಟಿಸುವಷ್ಟರ ಮಟ್ಟಿಗಿನ ಲಾಬಿ ನಡೆಸಲು ಇಲ್ಲಿನ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಜಾತಿ ಮತಬ್ಯಾಂಕ್ ಲಾಬಿ ನಡೆಸುವುದು ಇಲ್ಲಿನವರಿಗೆ ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರಬಹುದು’ ಎಂದು ಕಾಂಗ್ರೆಸ್ನ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.

‘ಡಿ.ಕೆ.ಶಿವಕುಮಾರ್ ಪ್ರಮಾಣ ವಚನಕ್ಕೆ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದ ವೇಳೆ ಅಲ್ಲಿಯೇ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಶಿವಕುಮಾರ್ ಅವರನ್ನು ಆಲಂಗಿಸಿಕೊಂಡರು. 9 ಬಾರಿ ಶಾಸಕರಾಗಿರುವ ದೇಶಪಾಂಡೆ ಅವರಿಗೆ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವ ವಿಶ್ವಾಸವಿದೆ’ ಎಂದು ದೇಶಪಾಂಡೆ ಆಪ್ತರೊಬ್ಬರು ತಿಳಿಸಿದರು.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಮಂಕಾಳ ವೈದ್ಯ ಅವರು ಡಿ.ಕೆ.ಶಿವಕುಮಾರ್ ಅತ್ಯಾಪ್ತರಲ್ಲಿ ಒಬ್ಬರು. ಸಚಿವ ಸಂಪುಟದಲ್ಲಿ ಅವರಿಗೆ ಮತ್ತೆ ಅವಕಾಶ ಸಿಗಬಹುದು. ಮೀನುಗಾರ ಸಮುದಾಯದಿಂದ ಆಯ್ಕೆಯಾದ ಮತ್ತೊಬ್ಬ ಪ್ರತಿನಿಧಿ ಕಾಂಗ್ರೆಸ್ನಲ್ಲಿ ಬೇರೆಯವರು ಇಲ್ಲ. ಹೀಗಾಗಿ, ಅವರು ಲಾಬಿ ನಡೆಸಬೇಕಾಗಿಲ್ಲ’ ಎಂದು ಭಟ್ಕಳದ ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಚಿವ ಸ್ಥಾನಕ್ಕೆ ಪ್ರಬಲ ಲಾಬಿ ನಡೆಸದಿದ್ದರೂ ಮೊದಲ ಹಂತದಲ್ಲಿ ಅವರ ಸೋದರ ಸಂಬಂಧಿ ಮಧು ಬಂಗಾರಪ್ಪ ಅವರು ಸಚಿವ ಸಂಪುಟ ಸೇರದಿರುವುದು ಕುತೂಹಲ ಮೂಡಿಸಿದೆ. ಈಡಿಗ ಕೋಟಾದಡಿ ಭೀಮಣ್ಣ ಅವರಿಗೆ ಅದೃಷ್ಟ ಖಲಾಯಿಸಬಹುದು ಎಂಬ ನಂಬಿಕೆ ಅವರ ಕಾರ್ಯಕರ್ತರಲ್ಲಿದೆ. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಕಾರವಾರ ಶಾಸಕ ಸತೀಶ ಸೈಲ್ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ. ಹೀಗಾಗಿ, ಜಿಲ್ಲೆಯಿಂದ ಮೂವರಲ್ಲಿ ಯಾರ ಪಾಲಿಗೆ ಹುದ್ದೆ ಸಿಗಬಹುದು ಎಂಬ ಕುತೂಹಲ ಜೀವಂತವಿದೆ.

ಹೆಬ್ಬಾರ ನಡೆ ಕುತೂಹಲ

ಬಿಜೆಪಿಯಿಂದ ಆಯ್ಕೆಯಾದರೂ ಕಳೆದ ಎರಡು ವರ್ಷದಿಂದ ಕಾಂಗ್ರೆಸ್ಗೆ ಪರೋಕ್ಷ ಬೆಂಬಲ ನೀಡುತ್ತಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಮಾಣ ವಚನಕ್ಕೂ ಮುನ್ನ ಶಿವಕುಮಾರ್ ಕೈ ಕುಲುಕಿದರು. ಕಳೆದ ಮೂರ್ನಾಲ್ಕು ದಿನಗಳಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಹೆಬ್ಬಾರ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳನ್ನು ಹರಿಬಿಟ್ಟು ಸಂಭ್ರಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ವರಿಷ್ಠರು ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ

ಆರ್.ವಿ.ದೇಶಪಾಂಡೆ ಹಳಿಯಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.