ಜೊಯಿಡಾ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಶನಿವಾರ ತಾಲ್ಲೂಕಿನ ಕುಂಬಾರವಾಡಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿಸಲಾಗಿತ್ತು.

ಯಾವ ಸಂತೆಗೂ ಕಡಿಮೆ ಇಲ್ಲದಂತೆ ನಡೆದ ಈ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ಗುಂಪುಗಳನ್ನು ಮಾಡಿ ಸುಮಾರು 22 ಅಂಗಡಿಗಳನ್ನು ಹಾಕಿದ್ದರು. ತಮ್ಮ ತಮ್ಮ ಮನೆಯಂಗಳದಲ್ಲಿ ಕೈತೋಟ ಮಾಡಿ ಸಾವಯುವ ಬೇಸಾಯದ ಮೂಲಕ ಬೆಳೆದ ವಿವಿಧ ಬಗೆಯ ಗೆಡ್ಡೆ ಗೆಣಸುಗಳು, ಜಕೋತಾ ಹಣ್ಣು, ಕುಂಬಳಕಾಯಿ, ಜೇನುತುಪ್ಪ, ಪಪ್ಪಾಯಿ, ಬಾಳೆಹಣ್ಣು, ನಿಂಬೆ, ಅಪ್ಪೆಮಿಡಿ, ವಾಟೆ ಹುಳಿ, ವಿವಿಧ ಬಗೆಯ ಸೊಪ್ಪುಗಳು ಸೇರಿದಂತೆ ಸುಮಾರು 50ಕ್ಕೂ ಅಧಿಕ ಬಗೆಯ ವಸ್ತುಗಳನ್ನು ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಮಾರಾಟ ಮಾಡುವ ಮೂಲಕ ಸುಮಾರು ₹ 8,500 ವ್ಯವಹಾರ ನಡೆಸಿದರು.

ಜೊತೆಗೆ ವಿದ್ಯಾರ್ಥಿಗಳು ಮಂಡಕ್ಕಿ, ಸಿಹಿ ತಿಂಡಿಗಳನ್ನು, ತಂಪು ಪಾನೀಯಗಳನ್ನು ಸಹ ಮಾರಾಟಕ್ಕೆ ಇಟ್ಟಿದ್ದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯರು ಮತ್ತು ಶಾಲೆಯ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ವಸ್ತುಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ನೆರವಾದರು.

ವೈವಿಧ್ಯಮಯ ಅಂಗಡಿಗಳಿಂದ ರಾರಾಜಿಸಿದ ಸಂತೆಯಲ್ಲಿ ಗೆಡ್ಡೆ ಗೆಣಸು ಮತ್ತು ಮಂಡಕ್ಕಿ ಖಾರಾ ಆಕರ್ಷಣೆಯಾಗಿತ್ತು.

ಗ್ರಾಮ ಪಂಚಾಯ್ತಿ ಸಿಬ್ಬಂದಿ, ಪಾಲಕ, ಪೋಷಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ವಿದ್ಯಾರ್ಥಿಗಳಿಗೆ ಮಕ್ಕಳನ್ನು ಹುರಿದುಂಬಿಸಿದರು.

ಮಕ್ಕಳಲ್ಲಿ ಕಲಿಕೆಯ ಜೊತೆಗೆ ವ್ಯವಹಾರಿಕ ಜ್ಞಾನ ಮತ್ತು ಹೊಸತು ಇರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಸ್ಥಳೀಯವಾಗಿ ಬೆಳೆದ ವಸ್ತುಗಳನ್ನು ತಂದು ಮಾರಾಟ ಮಾಡಿದ್ದಾರೆ, ಇವರ ಶ್ರಮದ ಕುರಿತು ಹೆಮ್ಮೆ ಇದೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕಿ ರಾಜಶ್ರೀ ಗಾಂವಕರ.

ಸಂತೆಗೆ ನಮ್ಮ ಪಾಲಕರು ಮತ್ತು ಶಿಕ್ಷಕರು ಉತ್ತಮ ಮಾರ್ಗದರ್ಶನ ಮತ್ತು ಸಹಕಾರ ನೀಡಿದರು. ಹೋಟೆಲ್ ನಂತಹ ಉದ್ಯಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಇದು ಗ್ರಾಹಕರನ್ನು ಸೆಳೆಯಲು ಕಾರಣವಾಗುತ್ತದೆ . ಸ್ವ ಉದ್ಯೋಗದ ಮೂಲಕ ಒಳ್ಳೆಯ ಜೀವನ ನಡೆಸಬಹುದು ಎಂದು ಶಿಕ್ಷಕರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.