ಅಂಕೋಲಾ: ರಮಾನಂದ ನಾಯಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮರೆಯಲಾಗದ ಮಾಣಿಕ್ಯ. ಅವರನ್ನು ಕಳೆದುಕೊಂಡು ಈ ಜಿಲ್ಲೆಗೆ ಅಪಾರ ಹಾನಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಆರ್.ಜಿ. ಗುಂದಿ ಹೇಳಿದರು.

ಪಟ್ಟಣದ ನಾಡವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಗಲಿದ ರಮಾನಂದ ನಾಯಕ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಶಾಂತರಾಮ ನಾಯಕ ಮಾತನಾಡಿ, ಸಜ್ಜನ ವ್ಯಕ್ತಿತ್ವದ ಕೊಂಡಿ ಕಳಿಚಿದಂತಾಗಿದೆ. ಓರ್ವ ಸಚ್ಚಾರಿತ್ರ್ಯವಂತನನ್ನು ಕಳೆದುಕೊಂಡಿದ್ದೇವೆ. ರಾಮಕೃಷ್ಣ ಹೆಗಡೆಯವರಿಂದ ಉತ್ತರ ಕನ್ನಡ ಜಿಲ್ಲೆಯ ಮುಖ್ಯಮಂತ್ರಿ ಎಂದು ಎನಿಸಿಕೊಂಡ ರಮಾನಂದ ನಾಯಕ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿದ್ದಾರೆ ಎಂದರು.

ಡಿಸಿಸಿ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ರಮಾನಂದ ನಾಯಕರವರ ಆದರ್ಶಗಳನ್ನು ಇಂದಿನ ನಾವು ನೀವೆಲ್ಲರೂ ಸ್ವಲ್ಪವಾದರೂ ಅನುಸರಿಸಿದಲ್ಲಿ ನಾವು ಸಹ ಸಜ್ಜನಿಕೆಯಿಂದ ರಾಜಕಾರಣ ಮಾಡಲು ಸಾಧ್ಯ. ರಮಾನಂದ ನಾಯಕ ಅವರ ಜಿಲ್ಲೆಗೆ ಸಾತ್ವಿಕ ಆಸ್ತಿಯಾಗಿದ್ದರು. ಅವರ ದಿವ್ಯ ಆತ್ಮಕ್ಕೆ ಸದ್ಗತಿ ದೊರೆಯಲಿ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.

ಹಿರಿಯರಾದ ಕಾಳಪ್ಪ ನಾಯಕ, ನಿವೃತ್ತ ಐಎಎಸ್ ಅಧಿಕಾರಿ ಪಾಂಡುರಂಗ ನಾಯಕ, ವಸಂತ ನಾಯಕ, ಪತ್ರಕರ್ತ ವಿಠಲದಾಸ್ ಕಾಮತ, ಶಿವಾನಂದ ನಾಯಕ, ಜಗದೀಶ್ ನಾಯಕ, ಹೊನ್ನಮ್ಮ ನಾಯಕ, ಮಂಜೇಶ್ವರ್ ನಾಯಕ, ಎನ್.ವಿ.ರಾಠೋಡ್, ರಾಜೇಂದ್ರ ಶೆಟ್ಟಿ, ಸುಭಾಷ್ ನಾರ್ವೆಕರ್, ಮಹಾಂತೇಶ ರೇವಡಿ, ಮಂಜುನಾಥ ಬರ್ಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-802438127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.