ಶಿರಸಿ: ಪಶ್ಚಿಮ ಘಟ್ಟದ ಜೀವನಾಡಿಗಳಾದ ಬೇಡ್ತಿ, ಅಘನಾಶಿನಿ ಹಾಗೂ ಶಾಲ್ಮಲಾ ನದಿಗಳ ಸಂರಕ್ಷಣೆಗಾಗಿ ಮಹಾಶಿವರಾತ್ರಿಯ ದಿನವಾದ ಫೆ.15ರಂದು ನದಿ ತಟದ ಹಳ್ಳಿಗಳ ಜನರು ಒಗ್ಗೂಡಿ ನದಿ ಪೂಜೆ ನಡೆಸುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಕರೆ ನೀಡಿದ್ದಾರೆ.

ಸರ್ಕಾರವು ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಈ ಮೂಲಕ ಆಗ್ರಹಿಸಲಾಗುವುದು. ನದಿಗಳ ಉಳಿವಿಗೆ ಪ್ರಾರ್ಥನೆ ಸಲ್ಲಿಸುವುದರ ಜತೆಗೆ, ಜನರಲ್ಲಿ ಅರಿವು ಮೂಡಿಸಲು ಹಾಡು, ಘೋಷಣೆ, ಕಿರು ಪಾದಯಾತ್ರೆ, ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸಲು ಶ್ರೀಗಳು ಸೂಚಿಸಿದ್ದಾರೆ.

ಗುರುವಾರ ನದಿ ಪೂಜೆಯ ಕುರಿತು ಮಾಹಿತಿ ನೀಡಿದ ಸಮಿತಿಯ ಸಂಚಾಲಕ ಸುರೇಶ ಹೆಗಡೆ, ‘ಈಗಾಗಲೇ ಸಹಸ್ರಲಿಂಗ ಹಾಗೂ ಬಾಳೂರು ಸೇರಿದಂತೆ ವಿವಿಧೆಡೆ ಪೂಜೆಗೆ ಸಿದ್ಧತೆ ನಡೆದಿದೆ. ಕುಮಟಾ ತಾಲ್ಲೂಕಿನಲ್ಲೂ ಅಘನಾಶಿನಿ ನದಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಗುವುದು’ ಎಂದಿದ್ದಾರೆ. ಮತ್ತೊಬ್ಬ ಸಂಚಾಲಕ ಗೋಪಾಲಕೃಷ್ಣ ತಂಗರಮನೆ ಮಾತನಾಡಿ,‘ನೆಲೆಮಾವು ಮಠದ ಶ್ರೀಗಳು ಈ ನದಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಪ್ರತಿ ವರ್ಷದಂತೆ ಈ ಬಾರಿಯೂ ಶಿವರಾತ್ರಿಯಂದು ಶಾಲ್ಮಲಾ ನದಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ ಸಹಸ್ರಲಿಂಗದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಶಾಲ್ಮಲಾ ಉಳಿಸಿ ಪೂಜಾ ಕಾರ್ಯಕ್ರಮ ಮತ್ತು ಜನಜಾಗೃತಿ ಸಭೆ ನಡೆಯಲಿದೆ’ ಎಂದು ಸಂಚಾಲಕ ಅನಂತ ಹುಳಗೋಳ ಮಾಹಿತಿ ನೀಡಿದ್ದಾರೆ. ನದಿ ಮೂಲಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಪ್ರಮುಖರು ವಿನಂತಿಸಿದರು.

ಶಿವರಾತ್ರಿ ದಿನದಂದು ನದಿ ನೀರಿನಲ್ಲೇ ನಿಂತು ಬೇಡ್ತಿ ಬಿಡೆವು ಎಂದು ಘೋಷಣೆ ಮಾಡುವ ಮೂಲಕ ಹೋರಾಟದ ಸಂಕಲ್ಪ ಮಾಡಲಿದ್ದೇವೆ ನರಸಿಂಹ ಸಾತೊಡ್ಡಿ ನದಿ ಪೂಜೆ ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.