ಶಿರಸಿ: ‘ಗ್ರಾಮೀಣ ಭಾಗದ ರಸ್ತೆಗಳ ಸಂಪರ್ಕ ಸುಧಾರಿಸುವುದು ಮತ್ತು ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ನಾಡಿನ ಸಮಗ್ರ ವಿಕಾಸ ಸಾಧ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲ್ಲೂಕಿನ ಇಸಳೂರು, ಕೊಡ್ನಗದ್ದೆ ಮತ್ತು ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ₹3.36 ಕೋಟಿ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಜನರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಮುಖ್ಯ ಆಶಯವಾಗಿದೆ. ಹೀಗಾಗಿ ಕಾಮಗಾರಿಗಳಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಇದೇ ವೇಳೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಮನಬೈಲ್ನಿಂದ ಜವಳಗುಂದಿಗೆ ಹೋಗುವ ರಸ್ತೆಯಲ್ಲಿ ₹15 ಲಕ್ಷ ವೆಚ್ಚದ ಸೇತುವೆ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಜಿಗುಡ್ಡೆ ರಸ್ತೆ ತಡೆಗೋಡೆಗೆ ₹50 ಲಕ್ಷ, ಜಡ್ಡಿಗದ್ದೆ ಹೊಸಕೊಪ್ಪದಿಂದ ಗಣೇಶ ಫಾಲ್ಸ್ ರಸ್ತೆ ಸುಧಾರಣೆಗೆ ₹22 ಲಕ್ಷ, ಸರನಗದ್ದೆ ಮಿಂಟೆಪಾಲ್ಗೆ ಹೋಗುವ ರಸ್ತೆಗೆ ₹25 ಲಕ್ಷ ಹಾಗೂ ಜಡ್ಡಿಗದ್ದೆ ಮುಖ್ಯ ರಸ್ತೆಯಿಂದ ಧೂಳಳ್ಳಿ ಶಾಲೆಯವರೆಗಿನ ರಸ್ತೆ ಸುಧಾರಣೆಗೆ ₹20 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಅದೇ ರೀತಿ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಸ್ಕಿಯಿಂದ ಶಿರಗುಣಿ ಮಾರ್ಗವಾಗಿ ಉಡಾಳಗದ್ದೇ ಸೇರುವ ರಸ್ತೆ ಸುಧಾರಣೆಗೆ ₹1 ಕೋಟಿ, ಧೋರಣಗಿರಿ ಹಾಲಿನ ಡೈರಿಯಿಂದ ಹೊಸರಿಮನೆ-ದೇವಿತೋಟ ಮಾರ್ಗದ ರಸ್ತೆಗೆ ₹20 ಲಕ್ಷ, ಶಿರಸಗಾಂವ ಮುಖ್ಯ ರಸ್ತೆಯಿಂದ ಹಗುರಮನೆವರೆಗೆ ₹35 ಲಕ್ಷ ಹಾಗೂ ಮಡಗಿಕಾನು, ಮುಂದಿಗೆಮನೆ, ವಾಟೆಬೆಟ್ಟ ಮಾರ್ಗದ ರಸ್ತೆ ಸುಧಾರಣೆಗೆ ₹48 ಲಕ್ಷ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಪ್ರಮುಖರಾದ ಖಾಸಿಂ ಸಾಬ್, ಶಶಿಕಲಾ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ನಾರಾಯಣ ಹೆಗಡೆ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-20-1914970399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.