ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ ಭಾಗದಲ್ಲಿ ಸಂಭವಿಸಿದ ಭೀಕರ ಚಿಪ್ಪೆಕಲ್ಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳ ನೆರವಿಗೆ ಸಚಿವ ಮಂಕಾಳ ವೈದ್ಯ ಮಾನವೀಯತೆ ಮೆರೆದಿದ್ದು, ತಮ್ಮ ಇಲಾಖೆಯ ವತಿಯಿಂದ ₹ 10 ಲಕ್ಷ ಪರಿಹಾರ ಮಂಜೂರು ಮಾಡಿಸಿರುವುದಾಗಿ ತಿಳಿಸಿದ್ದಾರೆ. ದುರಂತದಲ್ಲಿ ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ತಕ್ಷಣ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ದುರಂತದ ಬಳಿಕ ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು, ಬದುಕಿನ ಸಂಕಷ್ಟದ ನಡುವೆ ಸರ್ಕಾರ ಮತ್ತು ಸಮಾಜ ಸಂತ್ರಸ್ತ ಕುಟುಂಬಗಳ ಜೊತೆ ನಿಲ್ಲಬೇಕಾಗಿದ್ದು ಇದಕ್ಕೆ ತಾವು ಬದ್ದರಿದ್ದೆವೆ. ಈಗಾಗಲೇ ಸರ್ಕಾರದಿಂದ ತಲಾ ₹ 5 ಲಕ್ಷ ಪರಿಹಾರ ಮಂಜೂರಾಗಿದ್ದು, ಅದಕ್ಕೆ ಹೆಚ್ಚುವರಿಯಾಗಿ ತಮ್ಮ ಇಲಾಖೆಯಿಂದ ₹ 10 ಲಕ್ಷ ನೆರವು ಬಿಡುಗಡೆ ಮಾಡಲಾಗಿದ್ದೂ ಒಟ್ಟು 1ಕೋಟಿ 65 ಲಕ್ಷ ಪರಿಹಾರ ನೀಡಿದಂತಾಗಿದೆ ಎಂದರು.

ಅಲ್ಲದೆ, ಪರಿಹಾರದ ಚೆಕ್ಗಳು ಸಿದ್ದವಾಗಿದ್ದು ಈ ಕೂಡಲೆ ವಿತರಿಸಲಾಗುವುದು. ಮೃತರ ಮಕ್ಕಳ ಶಿಕ್ಷಣ, ಕುಟುಂಬದ ಭವಿಷ್ಯದ ಕುರಿತು ವಿಶೇಷ ಗಮನ ಹರಿಸಲಾಗುವುದು ಎಂದರು.

ನಾಮಧಾರಿ ಸಮಾಜಬಾಂಧವರು ಸಹ ಮೃತರ ಕುಟುಂಬಗಳ ನೆರವಿಗೆ ಮುಂದಾಗುತ್ತಿದ್ದು, ಮಾನವೀಯತೆ ಮೆರೆಯುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-2061824221

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.