ಹಳಿಯಾಳ: ‘ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ಕುಡಿಯವ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕು’ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಹಳಿಯಾಳ, ದಾಂಡೇಲಿ, ಜೋಯಿಡಾ ತಾಲ್ಲೂಕುಗಳ ಕುಡಿಯುವ ನೀರಿನ ಟಾಸ್ಕ್ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎಲ್ಲೆಲ್ಲಿ ಕುಡಿಯುವ ನೀರಿನ ಅಭಾವವಾಗುತ್ತದೆ ಅಲ್ಲಿ ಸಮೀಪದ ಗದ್ದೆಗಳ ಮಾಲೀಕರ ಬೋರ್ವೆಲ್ಗಳಿಂದ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಸಿ ಹಾಗೂ ಬೋರ್ವೆಲ್ಗಳಿಂದ ನೀರನ್ನು ಪಡೆಯುವಾಗ ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಹಾಗೂ ಖಾಸಗಿದಾರರ ಒಪ್ಪಂದ ಕರಾರು ಪತ್ರವನ್ನು ಕಾನೂನೂ ರೀತ್ಯ ಮಾಡಿಕೊಳ್ಳಬೇಕು’ ಎಂದರು.

‘ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು. ಅವಶ್ಯಕತೆ ಇದ್ದಲ್ಲಿ ಬೋರ್ವೆಲ್ ತೋಡಿಸಿ ಹಾಗೂ ಕುಡಿಯುವ ನೀರಿನ ಬಗ್ಗೆ ಆಯಾ ಗ್ರಾಮಗಳಲ್ಲಿ ತೆರಳಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

ತಹಶೀಲ್ದಾರ್ ಫೀರೊಜ್ ಷಾ ಸೋಮನಕಟ್ಟಿ ಮಾಹಿತಿ ನೀಡಿ, ‘ತಾಲ್ಲೂಕಿನ 11 ಪಂಚಾಯಿತಿಗಳಲ್ಲಿನ 25 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು ಈಗಾಗಲೇ ಬೋರ್ವೆಲ್ ಮಂಜೂರಾತಿ ಮಾಡಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಬೋರ್ವೆಲ್ ಮಂಜೂರಾತಿ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಒಪ್ಪಂದ ಕರಾರು ಪತ್ರ ಮಾಡಿಕೊಳ್ಳಬೇಕು. ಸಭೆಗೆ ಸಹ ಒಪ್ಪಂದ ಕರಾರು ಪತ್ರ ತರಬೇಕು ಎಂದು ಶಾಸಕರು ಸೂಚಿಸಿದರು.

‘ದಾಂಡೇಲಿಯಲ್ಲಿ 24X7 ಕುಡಿಯುವ ನೀರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯಾ ವಾರ್ಡ್ಗಳಲ್ಲಿ ಸಮಯ ನಿಗದಿಗೊಳಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಜೋಯಿಡಾದಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿಕೊಳ್ಳುವಲ್ಲಿ ಕೆಲವು ಖಾಸಗಿಯವರು ತಡೆಹಿಡಿದು ನ್ಯಾಯಾಲಯಕ್ಕೆ ತೆರಳಿರುವುದರಿಂದ ತೊಂದರೆ ಆಗುತ್ತದೆ. ಅಂತಹವರ ಮನವೊಲಿಸಿ ಕುಡಿಯುವ ನೀರು ಸರಬರಾಜಿಗೆ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಆಧಿಕಾರಿ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಎಲ್ಲಿಯೂ ತೆರಳಬಾರದು. ಕೇಂದ್ರ ಸ್ಥಾನ ಬಿಟ್ಟು ತೆರಳುವಾಗ ಹಿರಿಯ ಅಧಿಕಾರಿಗಳ ಪರವಾನಗಿ ತೆಗೆದುಕೊಂಡು ತೆರಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಬೆಳವಟಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವಿಗೀಡಾದ ಅಳ್ನಾವರ ಕೋಗಿಲಕೇರಿ ಗ್ರಾಮದ ಶಿವಾನಂದ ರುದ್ರಪ್ಪ ಅಂಗಡಿ ಕುಟುಂಬಸ್ಥರಿಗೆ ₹5 ಲಕ್ಷದ ಸಹಾಯಧನ ಪರಿಹಾರದ ಚೆಕ್ನ್ನು ಶಾಸಕರು ವಿತರಿಸಿದರು. ಸಿಡಿಲು ಬಡಿದು ನಾಲ್ಕು ಕುರಿಗಳು ಮೃತಗೊಂಡ ಕುರಿ ಸಾಕಾಣಿಕೆದಾರರಿಗೆ ₹25 ಸಾವಿರ ಪರಿಹಾರ ಧನ ವಿತರಿಸಲಾಯಿತು.

ಹಳಿಯಾಳ ದಾಂಡೇಲಿ, ಜೋಯಿಡಾ ಭಾಗದ ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-1783180430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.