ಕಾರವಾರ: ಅತಿಯಾದ ಮೊಬೈಲ್ ಬಳಕೆ, ಬೆಟ್ಟಿಂಗ್ ಸಂಬಂಧಿತ ಆ್ಯಪ್ಗಳ ಗೀಳು, ಹದಿಹರೆಯದ ಪ್ರೇಮ ಹೀಗೆ ಹತ್ತಾರು ಕಾರಣಗಳಿಂದ 15ರಿಂದ 32 ವಯಸ್ಸಿನವರಲ್ಲಿ ಮಾನಸಿಕ ಖಿನ್ನತೆ ಹೆಚ್ಚುತ್ತಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 20 ಸಾವಿರಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಒಳಪಡುತ್ತಿದ್ದಾರೆ.

ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ ಇಂತಹ ಆಘಾತಕಾರಿ ಸಂಗತಿಯನ್ನು ತೆರೆದಿಟ್ಟಿದೆ. ಮಧ್ಯ ವಯಸ್ಸಿನವರಲ್ಲಿ ತೀವ್ರ ತರಹದ ಮಾನಸಿಕ ಕಾಯಿಲೆ ಹೆಚ್ಚಿದ್ದರೆ, ಹದಿಹರೆಯದವರಿಂದ ಯೌವ್ವನದಲ್ಲಿರುವವರಲ್ಲಿ ಸಾಮಾನ್ಯ ಸ್ವರೂಪದ ಮಾನಸಿಕ ಕಾಯಿಲೆಗಳು ಹೆಚ್ಚುತ್ತಿದೆ ಎಂಬುದಾಗಿ ಮನೋರೋಗ ತಜ್ಞರು ಹೇಳಿದ್ದಾರೆ.

‘ಮಾನಸಿಕ ಖಿನ್ನತೆಗೆ ಚಿಕಿತ್ಸೆಗೆ ಬಂದವರನ್ನು ಆಪ್ತಸಮಾಲೋಚನೆಗೆ ಒಳಪಡಿಸಿದಾಗ ಅತಿಯಾದ ಮೊಬೈಲ್ ಬಳಕೆಯಿಂದ ಖಿನ್ನತೆ ಉಂಟಾಗಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಬೆಟ್ಟಿಂಗ್ ಆ್ಯಪ್ಗಳಲ್ಲಿ ಹಣ ಕಳೆದುಕೊಂಡವರು, ಮಾದಕ ವ್ಯಸನಕ್ಕೆ ತುತ್ತಾದವರು ಖಿನ್ನತೆಗೆ ಒಳಗಾಗುವುದು ಹೆಚ್ಚುತ್ತಿದೆ. ಪಾಲಕರ ನಡುವಿನ ಕಲಹ, ಪರೀಕ್ಷೆಯ ಒತ್ತಡದಿಂದ ಹದಿಹರದೆಯ ಮಕ್ಕಳು ಖಿನ್ನರಾಗುತ್ತಿರುವುದು ಆಪ್ತಸಮಾಲೋಚನೆ ವೇಳೆ ಪತ್ತೆಯಾಗುತ್ತಿದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಸುಹಾಸ್ ಪಿ. ಹೇಳಿದರು.

‘ಓದಿನಲ್ಲಿ ಚುರುಕಾಗಿರುವ ಮಗು ಏಕಾಏಕಿ ಮಂಕಾಗುತ್ತದೆ. ಹೆಚ್ಚು ಮಾತನಾಡದೆ ಸುಮ್ಮನಿರುತ್ತಿದ್ದ ಬಾಲಕ ಏಕಾಏಕಿ ಪಟಪಟನೆ ಮಾತನಾಡಲು ತೊಡಗುತ್ತಾನೆ. ಇಂತಹ ವರ್ತನೆಗೆ ಬೆಚ್ಚಿದ ಪಾಲಕರು ದೇವರಲ್ಲಿ ಹರಕೆ ಹೊರಲು, ಮಾಟ ಮಂತ್ರ ಮಾಡಿಸಿದ್ದಾರೆಂಬ ಮೌಢ್ಯಕ್ಕೆ ಜೋತು ಬೀಳುತ್ತಾರೆ. ಆದರೆ, ಮಕ್ಕಳ ಅಂತಹ ವರ್ತನೆ ಹಿಂದೆ ಅವರಲ್ಲಿನ ಆಟಿಸಂ (ಸ್ವಲೀನತೆ) ಸಮಸ್ಯೆ ಇರುತ್ತದೆ. ಇದಕ್ಕೆ ಚಿಕಿತ್ಸೆ ಒದಗಿಸಿದರೆ ಮಕ್ಕಳು ಮುಂಚಿನಂತಾಗುತ್ತಾರೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಈಚೆಗೆ ಆಟಿಸಂ ಸಮಸ್ಯೆಗೆ ತುತ್ತಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ತೀರಾ ಹೆಚ್ಚು ಅನ್ನಿಸದಿದ್ದರೂ ಮುಂಚಿಗಿಂತ ಆಪ್ತಸಮಾಲೋಚನೆಗೆ ಬರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಮಿದುಳಿನಲ್ಲಿ ಉಂಟಾಗುವ ಬದಲಾವಣೆ ಆಟಿಸಂ ಉಂಟಾಗಲು ಕಾರಣವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.