ಯಲ್ಲಾಪುರ: ‘ತಂಬಾಕು ಆರೋಗ್ಯಕ್ಕೆ ಹಾನಿಕರವಾದ ಸಾವಿರಾರು ರಾಸಾಯನಿಕ ಹೊಂದಿದ್ದು ಅದು ಪ್ರತಿವರ್ಷ ಭಾರತದಲ್ಲಿ 1.3 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ' ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಹೇಳಿದರು. ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ತಂಬಾಕು ಸೇವನೆ ಕ್ಯಾನ್ಸರ್ನಂತ ಮಾರಕ ರೋಗಕ್ಕೆ ಕಾರಣ ಆಗಬಹುದು. ಅಣಲಗಾರ ಮತ್ತು ಶೀಗೇಪಾಲ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಅಂಗಡಿ ಮಾಲೀಕರು 18 ವರ್ಷದ ಒಳಗಿನವರಿಗೆ ತಂಬಾಕು ಮಾರಬಾರದು. ಶಾಲೆಯಿಂದ 100 ಮೀಟರ್ ಅಂತರದಲ್ಲಿ ತಂಬಾಕು ಮಾರಾಟ ಮಾರಲು ಅವಕಾಶ ಇಲ್ಲ. ಒಮ್ಮೆ ತಂಬಾಕು ಚಟಕ್ಕೆ ಬಿದ್ದರೆ ಬಿಡುವುದು ಕಷ್ಟ. ಹಾಗಾಗಿ ಮಕ್ಕಳಿಗೆ ಏಳವೆಯಲ್ಲಿಯೇ ಈ ಕುರಿತು ತಿಳಿವಳಿಕೆ ನೀಡಬೇಕು'ಎಂದರು.

ತಾಲ್ಲೂಕು ಪಂಚಾಯಿತಿ ಇಒ ರಾಜೇಶ ಧನವಾಡಕರ, ಬಿಇಒ ಎನ್.ಆರ್.ಹೆಗಡೆ, ಸಿಪಿಡಿಒ ರೂಪಾ ಪಾಟೀಲ, ಆರೋಗ್ಯ ಇಲಾಖೆಯ ಮಹೇಶ ತಾಳಿಕೋಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.