ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ನಿಯಮ ಉಲ್ಲಂಘನೆ: ಭಟ್ಕಳದ ದಂಪತಿಗೆ ಜೈಲು ಶಿಕ್ಷೆ

Last Updated 5 ಜನವರಿ 2023, 21:03 IST
ಅಕ್ಷರ ಗಾತ್ರ

ಕಾರವಾರ: ವೀಸಾ ನಿಯಮ ಉಲ್ಲಂಘಿಸಿದ ಆರೋಪದಡಿ ಭಟ್ಕಳದ ದಂಪತಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಭಟ್ಕಳ ಪಟ್ಟಣದ ಮೌಲಾನಾ ಆಜಾದ್ ರಸ್ತೆಯ ನಿವಾಸಿ ಮಹಮದ್ ಇಲಿಯಾಸ್ ಪಿಲ್ಲೂರ ಮತ್ತು ಆತನ ಪತ್ನಿ ಪಾಕಿಸ್ತಾನ ಮೂಲದವರಾದ ನಾಸಿರಾ ಪರವೀನ್ ಇಲಿಯಾಸ್ ಶಿಕ್ಷೆಗೆ ಗುರಿಯಾದವರು.

ಭಟ್ಕಳದ ಯುವಕ‌ ಇಲಿಯಾಸ್ ಜತೆ ವಿವಾಹವಾಗಿ ಭಾರತಕ್ಕೆ ಬಂದಿದ್ದ ನಾಸಿರಾ ವೀಸಾ ಅವಧಿ ಮುಗಿದರೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ 2014ರಲ್ಲಿ ವೀಸಾ ಅವಧಿ ವಿಸ್ತರಣೆಗೆ ಪತಿಯೊಂದಿಗೆ ದೆಹಲಿಗೆ ತೆರಳಿದ್ದರು.

ಪ್ರಕರಣದ ಮೊದಲ ಆರೋಪಿ ಇಲಿಯಾಸ್ ಗೆ ಒಂದು ತಿಂಗಳ ಜೈಲು, ₹10 ಸಾವಿರ ದಂಡ, ಎರಡನೇ ಆರೋಪಿ ನಾಸಿರಾಗೆ ಆರು ತಿಂಗಳು ಜೈಲು, ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT