ಯಲ್ಲಾಪುರ: ‘ಬ್ರಾಹ್ಮಣತ್ವ ಜಾತಿಯಲ್ಲ. ಅದೊಂದು ಯೋಗ್ಯತೆ, ಆದರ್ಶ’ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಅಖಿಲ ಹವ್ಯಕ ಮಹಾಸಭಾ, ತಾಲ್ಲೂಕು ಹವ್ಯಕ ಸಂಘ, ಅಂಕೋಲಾ ಹವ್ಯಕ ಸಾಂಸ್ಕೃತಿಕ ಸಂಘ ಹಾಗೂ ಜೋಯಿಡಾ ಹವ್ಯಕ ಬಳಗ ಸಂಯುಕ್ತವಾಗಿ ಪಟ್ಟಣದ ಕಾರ್ಮಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಕಾರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಾಹ್ಮಣತ್ವ ನಶಿಸುತ್ತಿದೆ. ಬ್ರಾಹ್ಮಣರು ತಮ್ಮ ಆಚಾರ -ವಿಚಾರದಿಂದ ದೂರ ಸರಿಯುತ್ತಿದ್ದಾರೆ. ನಾವು ಮನೆಯಿಂದಲೇ ಆದರ್ಶದ ಮೇಲ್ಪಂಕ್ತಿ ಹಾಕಿ ಕೊಡಬೇಕಿದೆ. ದೇವಸ್ಥಾನಕ್ಕೆ ಹೋಗಿ ಅದನ್ನು ಕೊಡು, ಇದನ್ನು ಕೊಡು ಎಂದು ಕೇಳುವುದು ಸರಿಯಲ್ಲ. ಕರ್ಮದ ಫಲ ಅನುಭವಿಸಬೇಕು. ಯುವಕರು ಇಂದು ವಿವಾಹ ಮುಂದೆ ಹಾಕುವುದಕ್ಕೆ ಸಂಸ್ಕಾರದ ಕೊರತೆಯೇ ಕಾರಣ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ, ‘ನಮ್ಮನ್ನು ನಾವೇ ಸರಿಪಡಿಸಿಕೊಂಡು ಸಮಾಜಕ್ಕೆ ಆದರ್ಶಪ್ರಾಯ ರಾಗಬೇಕು. ಋಣ ಭಾವದಿಂದ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.

ಹಿರಿಯರಾದ ಪ್ರಮೋದ ಹೆಗಡೆ ಮಾತನಾಡಿ, ‘ಯುವಕರು ಪಟ್ಟಣ ಸೇರುತ್ತಿದ್ದಾರೆ. ಹಳ್ಳಿಯಲ್ಲಿ ಕೆಲಸ ಮಾಡುವ ಜನರಿಲ್ಲ. ನಾಳೆಯ ಬಗ್ಗೆ ಚಿಂತನೆ ಮಾಡಿದರೆ ಭಯವಾಗುತ್ತದೆ’ ಎಂದರು.

ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ನಿರ್ದೇಶಕ ಪ್ರಶಾಂತ ಹೆಗಡೆ ಇದ್ದರು. ಮಹೇಶ ಭಟ್ಟ ಹಾಗೂ ಶ್ರೀರಾಮ ಭಟ್ಟ ವೇದಘೋಷ ಪಠಿಸಿದರು. ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು. ಮಹಾಸಭಾದ ನಿರ್ದೇಶಕ ಗೋಪಾಲಕೃಷ್ಣ ಹಂಡ್ರಮನೆ ಸ್ವಾಗತಿಸಿದರು. ವೀಣಾ ಹೆಗಡೆ, ರವೀಂದ್ರ ಗಾಂವ್ಕರ ನಿರ್ವಹಿಸಿದರು. ಸಂಚಾಲಕ ಸಣ್ಣಪ್ಪ ಭಾಗ್ವತ ವಂದಿಸಿದರು.

ತಾಳಮದ್ದಳೆ ಅರ್ಥಧಾರಿ ಎಂ.ಎನ್. ಹೆಗಡೆ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಿತು. ನಾಗರಾಜ ಹೆಗಡೆ, ರಮೇಶ ಹೆಗಡೆ, ವೀಣಾ ಹೆಗಡೆ, ಭಾಸ್ಕರ ಗಾಂವ್ಕರ, ಶ್ರೀಧರ ಹೆಗಡೆ, ವಿನೋದ ಭಟ್ಟ ವಿಷಯ ಮಂಡಿಸಿದರು. ವಾಗ್ಮಿ ಜಿ.ಎಸ್. ನಟೇಶ ಸಂಸ್ಕಾರಗಳ ವೈಜ್ಞಾನಿಕ ಹಿನ್ನೆಲೆ ಕುರಿತು ಹಾಗೂ ವಿದ್ವಾನ್ ಜಗದೀಶ ಶರ್ಮಾ ಸಂಪ ಶೋಡಷ ಸಂಸ್ಕಾರಗಳ ಕುರಿತು ಉಪನ್ಯಾಸ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-20-852284928

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.