ಯಲ್ಲಾಪುರ: ಬೇಡ್ತಿ–ವರದಾ ಯೋಜನೆಯ ಸಲುವಾಗಿ ಎನ್ಡಬ್ಲುಡಿಎ ಮತ್ತು ರಾಜ್ಯ ಸಂಪನ್ಮೂಲ ಇಲಾಖೆಗೆ ಸ್ಥಳ ಸಮೀಕ್ಷೆ ನಡೆಸಲು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅರಣ್ಯ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಿತು.

ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳ ರಕ್ಷಣೆಯ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಿದೆ. ಈಗಾಗಲೇ ಹಲವು ಬೃಹತ್ ಯೋಜನೆಗಳಿಂದ ಕೆನರಾ ಅರಣ್ಯ ವೃತ್ತ ಜರ್ಝರಿತವಾಗಿವೆ. ಭೂ ಕುಸಿತ ಸೂಕ್ಷ್ಮ ವಲಯಗಳಾಗಿವೆ. ಈ ಕಾರಣಗಳಿಗೆ ಅರಣ್ಯ ಪರಿಸರ ಇಲಾಖೆ, ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳಿಗೆ ಹಾಗೂ ಅರಣ್ಯ ಸಮೀಕ್ಷೆ ನಡೆಸಲು ಅನುಮತಿ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವ್ಯವಸ್ಥಾಪಕ ಬೋರಕರ್ ಮನವಿ ಸ್ವೀಕರಿಸಿದರು.

ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ವಿಜ್ಞಾನಿ ಬಾಲಚಂದ್ರ ಸಾಯಿಮನೆ, ಆರ್ಎಫ್ಒ ನರೇಶ, ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ಪ್ರಮುಖರಾದ ಟಿ. ಆರ್. ಹೆಗಡೆ, ರವಿ ಭಟ್ಟ ಬರಗದ್ದೆ, ಜಿ.ಎಸ್. ಭಟ್ಟ ಕಾರೆಮನೆ, ವೆಂಕಟ್ರಮಣ ಬೆಳ್ಳಿ, ರಾಮಕೃಷ್ಣ ಕವಡಿಕೆರೆ, ಕೆ.ಟಿ. ಹೆಗಡೆ ಕೊರಗಿ, ಕೇಶವ ಭಟ್ಟ ಕವಡಿಕೆರೆ, ಗೋಪಾಲಕೃಷ್ಣ ಮಂಗಳಾರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-20-1811995907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.