ಯಲ್ಲಾಪುರ: ‘ಭಗವದ್ಗೀತೆ ಸಮಾಜದಲ್ಲಿ ಸೌಹಾರ್ದ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಕಾಸರಗೋಡಿನ ಗೀತಾಜ್ಞಾನ ಯಜ್ಞ ಟ್ರಸ್ಟ್ ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಸ್ನೇಹ ಸಮ್ಮಿಲನದಲ್ಲಿ ಅವರು ಮಾತನಾಡಿದರು.

ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ಉದಯಶಂಕರ ಭಟ್ ಮಾತನಾಡಿ, ‘ಭಗವದ್ಗೀತೆಯ ಜ್ಞಾನವನ್ನು ಮೈಗೂಡಿಸಿಕೊಂಡು ಅದನ್ನು ಅನುಭವ ವೇದ್ಯವಾಗಿಸಿಕೊಳ್ಳಬೇಕು. ಆಗ ನಮ್ಮಲ್ಲಿ ಗೀತೆಯ ಬೆಳಕು ಹರಿಯುತ್ತದೆ’ ಎಂದರು.

ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಮಾತನಾಡಿ, ‘ಭಗವದ್ಗೀತೆ, ರಾಮಾಯಣ, ಮಹಾಭಾರತ ಮೊದಲಾದ ಭಾರತೀಯ ಕಾವ್ಯಗಳು ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು’ ಎಂದರು.

ಗೀತಾಜ್ಞಾನ ಯಜ್ಞ ಟ್ರಸ್ಟ್ನ ಟ್ರಸ್ಟಿ ವಿಜಯ ಕಾನ್ಗುರು ಮಾತನಾಡಿದರು. ಗೀತಾಜ್ಞಾನ ಯಜ್ಞ ಟ್ರಸ್ಟ್ನ ಪ್ರಧಾನ ಸಂಚಾಲಕಿ ರಚನಾ ಹೆಗಡೆ ಅವಲೋಕನ ನೆರವೇರಿಸಿದರು.

ವಿದ್ವಾನ್ ಶಂಕರ ಭಟ್ ಬಾಲಿಗದ್ದೆ, ಗೀತಾಜ್ಞಾನ ಯಜ್ಞ ಟ್ರಸ್ಟ್ನ ತಾಲ್ಲೂಕು ಸಂಚಾಲಕಿ ವಿನುತಾ ಕೋಟೆಮನೆ, ಪ್ರಮುಖರಾದ ವನಜಾಕ್ಷಿ ಶಿವರಾಮ ಹೆಬ್ಬಾರ್ , ಸುರೇಶ ಶಾನಭಾಗ ಇದ್ದರು. ರಶ್ಮಿ ರಾಜಾರಾಮ ನಂದೊಳ್ಳಿ ಸ್ವಾಗತಿಸಿದರು. ಕೋಮಲಾ ಭಟ್ಟ ಶಿರಸಿ, ಗೌತಮಿ ಸಿದ್ದಿ, ಶ್ಯಾಮಲಾ ಕೆರೆಗದ್ದೆ ಅನಿಸಿಕೆ ವ್ಯಕ್ತಪಡಿಸಿದರು. ರಾಮಕೃಷ್ಣ ಕವಡಿಕೆರೆ ವಂದಿಸಿದರು. ಶಿಕ್ಷಕಿಯರಾದ ಮಾದೇವಿ ಭಟ್ ಮತ್ತು ವನಿತಾ ಭಾಗ್ವತ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-20-1617891881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.